

ಕೋಟ: ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ವತಿಯಿಂದ ಮುಂಚೂಣಿ ಪ್ರಾತ್ಯಕ್ಷಿಕೆ ಅಡಿಯಲ್ಲಿ ಮುಂಗಾರು ಹಂಗಾಮಿನ ಭತ್ತದ ಗದ್ದೆಗಳಲ್ಲಿ ವೌಚೇರಿಯಾ (ಹಳದಿ ಹಸಿರು ಪಾಚಿ) ಚೌತಿಯ ಕಳೆ ಹಾಗೂ ಇತರೆ ಕಳೆ ಜಾತಿಗಳ ನಿರ್ವಹಣೆ ಹೊರಾಂಗಣ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಮಣೂರು ಪಡುಕೆರೆ ಗ್ರಾಮದ ಪ್ರಗತಿಪರ ಕೃಷಿಕ ಜಯರಾಮ ಶೆಟ್ಟಿ ಮನೆ ವಠಾರದಲ್ಲಿ ಆಯೋಜಿಸಲಾಗಿತ್ತು.
ಪ್ರಗತಿ ಪರ ಕೃಷಿಕ ಕೃಷ್ಣಯ್ಯ ಶೆಟ್ಟಿ ಉದ್ಘಾಟಿಸಿದರು. ಕೃಷಿಕ ಭಾಸ್ಕರ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜ್ಞಾನಿಗಳು, ರೈತರು, ರೈತ ಮಹಿಳೆಯರಿಗೆ ಸ್ವಾಗತ ಕೋರಿದರು. ಸಂಪನ್ಮೂಲ ವ್ಯಕ್ತಿಯಾಗಿ, ಬ್ರಹ್ಮಾವರದ ಕೆ.ವಿ.ಕೆ.ವಿಜ್ಞಾನಿ ಡಾ.ಎನ್.ನವೀನ (ಬೇಸಾಯಶಾಸ್ತ್ರ) ಭತ್ತದ ಗದ್ದೆಗಳಲ್ಲಿ ಬರುವ ವಿವಿಧ ಜಾತಿಯ ಕಳೆಗಳ ನಿರ್ವಹಣೆ ಬಗ್ಗೆ ನೆರೆದಿದ್ದ ರೈತರಿಗೆ ಮಾಹಿತಿ ನೀಡಿದರು. ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.