

ಬೆನಕಟ್ಟಿ: ರೈತರು ರಸಾಯನಿಕ ಗೊಬ್ಬರ ಹಾಗೂ ಕಳೆ ನಾಶಕ ಔಷಧಕ್ಕೆ ಮಾರು ಹೋಗಿ ಮಣ್ಣಿನ ಲವತ್ತತೆ ನಾಶ ಮಾಡುತ್ತಿದ್ದಾರೆ ಎಂದು ಸಾವಯವ ಕೃಷಿಕ ಜಗದೀಶ ಹಿರೇಮಠ ಕಳವಳ ವ್ಯಕ್ತಪಡಿಸಿದರು.
ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಮುನವಳ್ಳಿಯ ಶ್ರೀ ಮುರರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಚನ್ನಬಸವ ಮಹಾಸ್ವಾಮೀಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ಶಿಬಿರದಲ್ಲಿ ಉಪನ್ಯಾಸ ನೀಡಿದರು.
ಕೆಎಸ್ಆರ್ಟಿಸಿಯ ಗಂಗಾಧರ ಗೊರಾಬಾಳ, ಕರೆಪ್ಪ ಪೂಜೇರ, ಸಿದ್ಧಾರೂಢ ಚೂರಿ, ಅಶೋಕ ಬೆನಕಟ್ಟಿ, ಸಿದ್ರಾಯಪ್ಪ ದೇವರಮನಿ, ಬಸಪ್ಪ ಸಂಗಟಿ, ಭೀಮಪ್ಪ ಹೊನಕುಪ್ಪಿ, ಮಹಾಬಳೇಶ್ವರ ವೀರಶೆಟ್ಟಿ, ಉಮೇಶ ಸಾವಳಗಿ, ಪ್ರಾಚಾರ್ಯರಾದ ಕೆ.ಬಿ.ನಲವಡೆ, ಎಂ.ಎಚ್.ಪಾಟೀಲ, ಆರ್.ಎಚ್.ಪೂಜೇರಿ, ಎಂ.ಗಿರೀಶ, ಎ.ಐ.ಸಂಕಣ್ಣವರ, ಎನ್.ಎಸ್.ಕಬ್ಬೂರ, ಡಿ.ಎಂ.ಗದಗಿನ ಇತರರಿದ್ದರು.