

ಉಡುಪಿ: ನಗರದ ವಿವಿಧೆಡೆ ಗಾಂಜಾ ಸೇವನೆ ಮಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಸಿಟಿಬಸ್ ನಿಲ್ದಾಣ ಹಳೇ ಕಟ್ಟಡದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಪ್ರೇಮನಾಥ ಯಾನೆ ಪ್ರೇಮಾ (19), 76 ಬಡಗುಬೆಟ್ಟು ಗ್ರಾಮದ ಇಂದಿರಾನಗರ-ಕುಕ್ಕಿಕಟ್ಟೆಯ ಮಸೀದಿ ಬಳಿ ಸ್ಟ್ಯಾನ್ಲಿ ಸಂದೀಪ್ (29), ಹನುಮಾನ್ ಗ್ಯಾರೇಜ್ ಬಳಿಯ ಧನುಷ್ ಕುಂದರ್ (18) ಎಂಬುವರನ್ನು ಬಂಧಿಸಲಾಗಿದೆ.
ಆರೋಪಿಗಳು ಗಾಂಜಾ ಮಾದಕ ದ್ರವ್ಯ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಮಾರಾಟ ಯತ್ನ, ಓರ್ವ ವಶ
ಪಡುಬಿದ್ರಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಕಾರ್ನಾಡು ಅಮೃತಾನಂದಮಯಿ ನಗರದ ಜೋಸ್ವಿನ್ ಜೋನಾಥನ್ ಡಿಸೋಜ (19) ಎಂಬಾತನನ್ನು ಸೋಮವಾರ ಪಡುಬಿದ್ರಿ ಪೊಲೀಸರು ಇಲ್ಲಿನ ಬೋರ್ಡ್ ಶಾಲಾ ಬಳಿ ಬಂಧಿಸಿ 12,000 ರೂ. ಮೌಲ್ಯದ 240 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಗಾಂಜಾ ಸೇವನೆ: ಕೋಟೆ ಗ್ರಾಪಂ ಬಳಿ ಶನಿವಾರ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ಕಲ್ಯಾಣಪುರ ನಿಡಂಬಳ್ಳಿಯ ಸೃಜನ್ ಸುಧಾಕರ ಪಾಲನ್(18) ಎಂಬಾತನ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.