ಆರೋಗ್ಯ ಮಾಹಿತಿ ಕಾರ್ಯ ಶುರು

13 kem 2
Published on

ಕೆಂಭಾವಿ: ಕರೊನಾ ಭೀತಿಯಿಂದ ಪರ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದು ಮನೆ ಸೇರಿರುವ ವಲಸಿಗರ ಮತ್ತು ಪಟ್ಟಣ ನಿವಾಸಿಗಳ ಆರೋಗ್ಯ ತಪಾಸಣೆ ಕಾರ್ಯ ಪಟ್ಟಣದಲ್ಲಿ ಸೋಮವಾರದಿಂದ ಆರಂಭವಾಗಿದೆ. ಅಂಗನವಾಡಿ ಕಾರ್ಯಕತರ್ೆ, ಪ್ರಾಥಮಿಕ ಶಾಲಾ ಶಿಕ್ಷಕ ಹಾಗೂ ಓರ್ವ ಸಹಾಯಕರನ್ನೊಳಗೊಂಡ ಕರೊನಾ ಸೇನಾನಿಗಳ ತಂಡ ಕಳೆದ ಮೂರು ದಿನಗಳಿಂದ ಈ ಕಾರ್ಯದಲ್ಲಿ ನಿರತವಾಗಿದ್ದು ಮನೆಮನೆಗಳಿಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ಮಾಹಿತಿ ಪಡೆದುಕೊಳ್ಳುತ್ತಿದೆ. ಮತದಾರರ ಗುರುತಿನ ಚೀಟಿ ಯಾದಿಯ ಅನುಸಾರವಾಗಿ ಈ ಕಾರ್ಯ ನಡೆಯುತ್ತಿದ್ದು, ಮನೆಗೆ ಬಂದ ಮಾಹಿತಿದಾರರಿಗೆ ತಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಉಪತಹಸೀಲ್ದಾರ ಮಲ್ಲಿಕಾಜರ್ುನ ಜನತೆಯಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net