

ಬೋರಗಾಂವ: ನಿಪ್ಪಾಣಿ ತಾಲೂಕು ಸೇರಿ ರಾಜ್ಯ ಗಡಿ ಭಾಗದಲ್ಲಿ ಹಲವು ನೇಕಾರರಿದ್ದಾರೆ. ನೇಕಾರರಿಗೆ ಸರ್ಕಾರದ ವತಿಯಿಂದ ಯಾವುದೇ ಸಾಲ ಸಿಗುತ್ತಿಲ್ಲ. ಗಡಿಭಾಗದ ನೇಕಾರರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಕೂಡ ಮಾಹಿತಿ ನೀಡಲಾಗುತ್ತಿಲ್ಲ.
ಲಾಕ್‌ಡೌನ್‌ನಿಂದಾಗಿ ನೇಕಾರರ ಬದುಕು ಶೋಚನೀಯವಾಗಿದೆ. ನಮಗೆ ಯೋಜನೆಗಳ ಲಾಭ ಕೊಡಿಸಲು ಪ್ರಯತ್ನಿಸಬೇಕು ಎಂದು ಮಾಣಕಾಪುರ ಪವರ್‌ಲೂಮ್ ಅಸೋಶಿಯೇಶನ್ ವತಿಯಿಂದ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿ ಯೂನಿಟ್ ವಿದ್ಯುತ್‌ಗೆ 2.25 ರೂ. ಬಿಲ್ ಆಕರಣೆ ಮಾಡುತ್ತಿದ್ದಾರೆ. 2020ರ ಫೆ. 1ರಿಂದ ಡಿ.31ರ ವರೆಗೆ ನೇಕಾರರ ವಿದ್ಯುತ್ ಬಿಲ್, ಸಾಲದ ಬಡ್ಡಿ ಮನ್ನಾ, ವೃತ್ತಿಪರ ನೇಕಾರರೆಂದು ಪರಿಗಣಿಸಿ 10 ಸಾವಿರ ಸಹಾಯಧನ ನೀಡಬೇಕು. ಅಪಘಾತ ವಿಮೆ ಸೌಲಭ್ಯ, ಶೇ.1 ಬಡ್ಡಿ ದರದಂತೆ 5 ಲಕ್ಷ ರೂ.ವರೆಗೆ ಸಹಾಯಧನ ನೀಡಬೇಕು ಎಂದು ಒತ್ತಾಯಿಸಲಾಯಿತು. ಉದ್ಯಮಿ ಅಭಿನಂದನ ಪಾಟೀಲ, ಅಭಯ ಚೌಗುಲೆ, ಅರ್ಜುನ ಕುಂಬಾರ, ಶಾಹೀರ್ ಕುಂಬಾರ, ಅವಧೂತ ಕುಂಬಾರ, ಸುನೀಲ ಕುಂಬಾರ, ಶ್ರೀಕಾಂತ ಕುಂಬಾರ, ಅನಿಲ ಪಾಟೀಲ, ಶುಭಂ ಸಾಳುಂಖೆ ಇದ್ದರು.