ನೇಕಾರರ ಜಾಗೃತಿ ಸಮಾವೇಶ

old hubballi
Published on

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ನೇಕಾರನಗರ ವೈ.ಎಸ್. ಬಂಕಾಪುರ ಕಲ್ಯಾಣ ಮಂಟಪದಲ್ಲಿ ಮೇ 4ರಂದು ಬೆಳಗ್ಗೆ 11ಗಂಚೆಗೆ ಜಿಲ್ಲಾ ಮಟ್ಟದ ಪಟ್ಟಸಾಲೆ ನೇಕಾರರ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಪಟ್ಟಸಾಲೆ ನೇಕಾರ ಸಂಘದ ಅಧ್ಯಕ್ಷ ಎಚ್.ತಿಪ್ಪೇಸ್ವಾಮಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ಸಮಾವೇಶ ನಡೆಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಶಾಸಕ ಪ್ರಸಾದ ಅಬ್ಬಯ್ಯ ವೆಬ್​ಸೈಟ್ ಉದ್ಘಾಟಿಸುವರು ಎಂದರು.

ಕೆಲಸವಿಲ್ಲದೇ ಜೀವನ ನಡೆಸುವುದು ನೇಕಾರರಿಗೆ ಕಷ್ಟವಾಗಿದೆ. ಹಿಂದುಳಿದ ವರ್ಗ 2ಎ ನಲ್ಲಿರುವ ಮೀಸಲಾತಿ ಪ್ರಮಾಣ ಶೇ. 15ರಲ್ಲಿ ಶೇ. 5ರಷ್ಟನ್ನು ಕುರುಬರಿಗೆ ಹಂಚಿಕೆ ಮಾಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಹಾಗಾದಲ್ಲಿ ನೇಕಾರರಿಗೆ ಅನ್ಯಾಯವಾಗಲಿದೆ. ಹಿಂದುಳಿದ ವರ್ಗ 2ಎ ನಲ್ಲಿ 106 ಜಾತಿಗಳಿವೆ. ನೇಕಾರರನ್ನು ಕಾರ್ವಿುಕರೆಂದು ಸರ್ಕಾರ ಮೊದಲು ಪರಿಗಣಿಸಬೇಕು. ನಿವೃತ್ತ ನೌಕರರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಶೇಖಾ, ಪರಶುರಾಮ ಕಾಂಬಳೆ, ಮಂಜುನಾಥ ಗಲ್ಲಿಕಟ್ಟಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net