

ಮುಂಡಗೋಡ: ತಾಲೂಕಾದ್ಯಂತ ರಂಜಾನ್ ಹಬ್ಬವನ್ನು ಮುಸ್ಲಿಮರು ಶ್ರದ್ಧೆಭಕ್ತಿಯಿಂದ ಸೋಮವಾರ ಆಚರಿಸಿದರು.
ಬಿಸಿಲಿನ ಧಗೆ ಹೆಚ್ಚಾಗಿದ್ದರಿಂದ ಬೇಗನೆ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪರಸ್ಪರ ಶುಭಾಶಯ ಕೋರಿದರು.
ನೂರಾನಿ ಮಸೀದಿ ಅಧ್ಯಕ್ಷ ಮಹ್ಮದಸಲೀಂ ನಂದಿಗಟ್ಟಿ ಮಾತನಾಡಿ, ವಕ್ ಬಿಲ್ ವಿರೋಧವಾಗಿ ಏ. 4ರಂದು ಪ್ರತಿಯೊಬ್ಬ ಮುಸ್ಲಿಂ ಕಪ್ಪು ಪಟ್ಟಿ ಧರಿಸಿ ಆ ದಿನ ನಮಾಜ್ ಮಾಡುವುದು ಹಾಗೂ ಒಂದು ದಿನದವರೆಗೂ ಕಪ್ಪು ಪಟ್ಟಿ ಧರಿಸುವಂತೆ ಹೇಳಿದರು. ನಂತರ ಐದು ಮಸೀದಿಗಳ ಅಧ್ಯಕ್ಷರ ಪರವಾಗಿ ಮುಸ್ಲಿಂ ಬಾಂಧವರು ಶುಭಾಶಯ ಕೋರಿದರು. ಗ್ರಾಮೀಣ ಭಾಗಗಳಲ್ಲಿಯೂ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.