ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ

ಉಜ್ಜಿನಿ ಸಮೀಪದ ನಿಂಬಳಗೇರೆಯಲ್ಲಿ ಪೊಲೀಸರಿಂದ ಸೈಬರ್ ಕ್ರೈಂ ಕುರಿತು ಜಾಗೃತಿ ಮೂಡಿಸಲಾಯಿತು. ಎಎಸ್‌ಐ ವೀರಭದ್ರಯ್ಯ, ಎಚ್‌ಸಿ ನಾಗರಾಜ ಕೋಗಳಿ, ಪಿಸಿ ಸುರೇಶ ಇತರರಿದ್ದರು..
ಉಜ್ಜಿನಿ ಸಮೀಪದ ನಿಂಬಳಗೇರೆಯಲ್ಲಿ ಪೊಲೀಸರಿಂದ ಸೈಬರ್ ಕ್ರೈಂ ಕುರಿತು ಜಾಗೃತಿ ಮೂಡಿಸಲಾಯಿತು. ಎಎಸ್‌ಐ ವೀರಭದ್ರಯ್ಯ, ಎಚ್‌ಸಿ ನಾಗರಾಜ ಕೋಗಳಿ, ಪಿಸಿ ಸುರೇಶ ಇತರರಿದ್ದರು..
Published on

ಉಜ್ಜಿನಿ: ವೇಗದ ಡಿಜಿಟಲ್ ಯುಗದಲ್ಲಿ ಬಹುಬೇಗ ತೊಂದರೆಗೆ ಸಿಲುಕಿಕೊಳ್ಳುತ್ತಿದ್ದೇವೆ. ಆದ್ದರಿಂದ ಆನ್‌ಲೈನ್ ಸುರಕ್ಷತೆಯ ಬಗ್ಗೆ ಸಲಹೆ ಪಡೆಯಬೇಕು ಎಂದು ಎಎಸ್‌ಐ ವೀರಭದ್ರಯ್ಯ ಹೇಳಿದರು.

ಸಮೀಪದ ನಿಂಬಳಗೇರೆ ಗ್ರಾಮದಲ್ಲಿ ಶನಿವಾರ 112 ಪೊಲೀಸರಿಂದ ಸೈಬರ್ ಕ್ರೈಂ ಜಾಗೃತಿ ಹಾಗೂ 1930 ಸಹಾಯವಾಣಿ ಮಾಹಿತಿ ನೀಡಲಾಯಿತು. ಫೋನ್ ಕರೆ ಹಾಗೂ ಸಂದೇಶಗಳ ಮೂಲಕ ಸಂಪರ್ಕಿಸುವ ಸೈಬರ್ ಕಳ್ಳರು ನಿಮ್ಮ ಬ್ಯಾಂಕ್ ಖಾತೆ, ವೈಯಕ್ತಿಕ ವಿವರ ತಿಳಿದು ಕನ್ನ ಹಾಕಿ ಸಂಕಷ್ಟಕ್ಕೆ ತಳ್ಳುತ್ತಾರೆ. ಹೀಗಾಗಿ ಇಂಥ ಅಕ್ರಮಗಳ ಬಗ್ಗೆ ಎಚ್ಚರದಿಂದ ಇರಬೇಕು. ಮೋಸದ ತಂತ್ರಗಳಿಗೆ ಬಲಿಯಾಗದಂತೆ ರಕ್ಷಿಸಿಕೊಳ್ಳಲು 1930 ಸಂಪರ್ಕಿಸಬಹುದು. ನಯವಾಗಿ ಮಾತನಾಡಿ ಮೋಸದಲ್ಲಿ ಸಿಲುಕಿಸುವ ದೊಡ್ಡ ಜಾಲವೇ ಇದೆ. ದ್ವಿಚಕ್ರ ವಾಹನದ ಬಳಕೆದಾರರು ವಾಹನಗಳಿಗೆ ವಿಮೆ ಮಾಡಿಸಿಕೊಳ್ಳಿ. ತಪ್ಪದೇ ಹೆಲ್ಮೆಟ್ ಧರಿಸಿ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net