ಮಾರಕಾಯುಧಗಳೊಂದಿಗೆ ದರೋಡೆಗೆ ಸಂಚು, ಮೂವರ ಬಂಧನ

Untitled-1 copy
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಟೀಚರ‍್ಸ್ ಕಾಲನಿಯ ಅಶ್ವತ್ಥಕಟ್ಟೆ ಬಳಿ ದರೋಡೆಗಾಗಿ ಮಾರಕಾಯುಧಗಳೊಂದಿಗೆ ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳನ್ನು ಗಸ್ತಿ ನಲ್ಲಿದ್ದ ಪೊಲೀಸರು ಬಂಧಿಸಿದ್ದು ಇನ್ನಿಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.                                                  ಬೆಂಗಳೂರಿನ ಕುವೆಂಪು ನಗರದ ಅಫ್ರಿದ್ ಅಹ್ಮದ್, ಮಾಲೂರಿನ ಶರಣ್ ಕುಮಾರ್ ಮತ್ತು ಚಿಂತಾಮಣಿ ನಗರದ ಸೊಣ್ಣಶೆಟ್ಟಹಳ್ಳಿ ಬಡಾವಣೆಯ ನಿವಾಸಿ ಶೋಯೆಬ್ ಬಂಧಿತ ಆರೋಪಿಗಳು. ಇವರಿಂದ ಒಂದು ಲಾಂಗ್, ಬಟನ್ ಚಾಕು, ಖಾರದಪುಡಿ ಪೊಟ್ಟಣ, ದ್ವಿಚಕ್ರವಾಹನ, ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಪರಾರಿಯಾಗಿರುವುವರನ್ನು ಬೆಂಗಳೂರಿನ ರಾಮಮೂರ್ತಿ ನಗರದ ಸಚಿನ್ ಮತ್ತು ಚಿಂತಾಮಣಿ ನಗರದ ವೆಂಕಟಗಿರಿಕೋಟೆಯ ನಿವಾಸಿ ಶಾಬೂ ಎಂದು ಗುರುತಿಸಲಾಗಿದೆ.
ನಗರಠಾಣೆ ಇನ್ಸ್ ಪೆಕ್ಟರ್ ರಂಗಶಾಮಯ್ಯ, ಎಎಸ್‌ಐ ಮುಕ್ತಿಯಾರ್ ಪಾಷಾ ಮತ್ತು ಸಿಬ್ಬಂದಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಟೀಚರ್ಸ್ ಕಾಲೋನಿಯ ಬಳಿ 5 ಜನರು ಆಯುಧಗಳನ್ನಿಡಿದುಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದರು. ಬಂಧಿತರು ಪೊಲೀಸ್ ವಿಚಾರಣೆಯಲ್ಲಿ ಯಾರಾದರೂ ಜನರು ರಸ್ತೆಯಲ್ಲಿ ಬಂದಾಗ ಅಡ್ಡಗಟ್ಟಿ ಹಣ, ಆಭರಣ, ಮೊಬೈಲ್ ಗಳನ್ನು ದೋಚಲು ಸಂಚು ರೂಪಿಸಲಾಗಿತ್ತು ಎಂಬುದಾಗ ತಿಳಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪರಾರಿಯಾಗಿರುವ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net