ಕಾಂಗ್ರೆಸ್ ಸರ್ಕಾರ ಬೀಳಿಸುತ್ತೇವೆ: ಕೆ.ಎಸ್.ಈಶ್ವರಪ್ಪ

Ex dcm k.s.Eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರವನ್ನು ಏಕೆ ಬೀಳಿಸಬಾರದು? ಈ ನಿಟ್ಟಿನಲ್ಲಿ ಏಕೆ ಪ್ರಯತ್ನಿಸಬಾರದು? ಜನವಿರೋಧಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಖಂಡಿತವಾಗಿಯೂ ಪ್ರಯತ್ನ ಮಾಡುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಸದ್ಯದ ಸ್ಥಿತಿ ಗಮನಿಸಿದರೆ ನಾವು ಸರ್ಕಾರ ಬೀಳಿಸುವುದು ಬೇಕಿಲ್ಲ. ಅವರದ್ದೇ ಪಕ್ಷದ ಶಾಸಕರೇ ಸರ್ಕಾರ ಬೀಳಿಸುತ್ತಾರೆ. ಈ ಸರ್ಕಾರ ಬಡವರ ಪರವಾಗಿಲ್ಲ ಎಂದು ಅವರ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರೂ ಅದನ್ನು ಬಹಿರಂಗವಾಗಿ ಹೇಳಿದ್ದಾರೆ. ಹೀಗಿರುವಾಗಿ ಕಾಂಗ್ರೆಸ್ ಆಡಳಿತ ಪತನಗೊಂಡು ಜನಪರ ಸರ್ಕಾರ ರಚನೆ ಮಾಡಿದರೆ ತಪ್ಪೇನು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕಾಂಗ್ರೆಸ್‌ನ 20 ಶಾಸಕರು ಗುಂಪು ಕಟ್ಟಿಕೊಂಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಬೆಳಗಾವಿ ಭೇಟಿ ಸಂದರ್ಭದಲ್ಲಿ ಉಸ್ತುವಾರಿ ಸಚಿವರು ಸೇರಿ 11 ಶಾಸಕರು ಗೈರು ಹಾಜರಾಗುತ್ತಾರೆ ಎಂದರೆ ಏನರ್ಥ. ಸರ್ಕಾರ ಬಂದು ನಾಲ್ಕು ತಿಂಗಳಾಗಿದೆ. ಐಟಿ ದಾಳಿ ವೇಳೆ 100 ಕೋಟಿ ರೂ. ಸಿಕ್ಕಿದೆ. ನಾಲ್ಕು ರಾಜ್ಯಗಳ ಚುನಾವಣೆ ನಡೆಯುತ್ತಿದ್ದು ಇಲ್ಲಿಂದ ಫಂಡಿಂಗ್ ಆಗುತ್ತಿದೆ. ಪ್ರತಿಪಕ್ಷವಾಗಿ ತನಿಖೆ ನಡೆಸಿ ಎಂದು ಹೇಳುವುದೇ ತಪ್ಪಾ? ಇದನ್ನು ಕೇಳಿದ್ದಕ್ಕೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net