ನೀವಾಗಿ ವೈದ್ಯರ ಬಳಿಗೆ ಹೋಗಬೇಡಿ ಆಂಬುಲೆನ್ಸ್ ನಾವೇ ಕಳುಹಿಸುತ್ತೇವೆ

carona logo
Published on

ಮಂಗಳೂರು: ಜಿಲ್ಲೆಯಲ್ಲಿ 4 ಹೊಸದು ಸೇರಿದಂತೆ ಒಟ್ಟು ಕರೊನಾ ಪಾಸಿಟಿವ್ ಕೇಸ್ 5ಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ಈ ರೋಗಿಗಳೊಂದಿಗೆ ಪ್ರಯಾಣಿಸಿದ, ಪ್ರಯಾಣಿಕರಿಗೆ ಜಿಲ್ಲಾಡಳಿತ ಕಡ್ಡಾಯ ಕ್ವಾರಂಟೈನ್ ಆದೇಶ ಹೊರಡಿಸಿದೆ.

ಕೊವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಎರಡು ವಿಮಾನಗಳಲ್ಲಿ(ಮಾ.19 ಬೆಳಗ್ಗೆ 5.30ರ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಮಾ.20ರ ಸಾಯಂಕಾಲದ ಎಸ್‌ಜಿ-60 ಸ್ಪೈಸ್‌ಜೆಟ್) ಪ್ರಯಾಣಿಸಿದ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳು ಗೃಹ ನಿಗಾವಣೆಯಲ್ಲೇ(ಕ್ವಾರಂಟೈನ್) ಇರಬೇಕು, ಯಾವ ಕಾರಣಕ್ಕೂ ಹೊರಗೆ ಹೋಗಬಾರದು ಎಂದು ಡಿಸಿ ಆದೇಶಿಸಿದ್ದಾರೆ.

ನಿಗಾದಲ್ಲಿರುವ ಪ್ರಯಾಣಿಕರು ಮನೆಯವರೊಂದಿಗೆ ಬೆರೆಯಬಾರದು, ಅದರಲ್ಲೂ ವಿಶೇಷವಾಗಿ ಮಕ್ಕಳು, ವೃದ್ಧರಿಂದ ದೂರವಿರುವುದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ನಿಗಾವಣೆಯಲ್ಲಿರುವವರು ಅಥವಾ ಅವರ ಮನೆಯವರು ತಮಗೆ ಯಾವುದೇ ರೋಗಲಕ್ಷಣ ಕಂಡು ಬಂದರೆ ತಕ್ಷಣವೇ ತಾಲೂಕು ಆರೋಗ್ಯಾಧಿಕಾರಿ, ತಾಲೂಕು ತಹಶೀಲ್ದಾರರನ್ನು ಸಂಪರ್ಕಿಸಿ. ಅಥವಾ ಜಿಲ್ಲಾ ವಿಪತ್ತು ಘಟಕ(1077) ಸಂಪರ್ಕಿಸಬಹುದು. ಜಿಲ್ಲಾಡಳಿತ ವತಿಯಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡಬಹುದು. ಯಾವುದೇ ಕಾರಣಕ್ಕೂ ನೇರವಾಗಿ ಆಸ್ಪತ್ರೆಗೆ ಅಥವಾ ವೈದ್ಯರ ಬಳಿಗೆ ಹೋಗಲೇಬಾರದು.

 ಯಾವುದೇ ರೋಗ ಲಕ್ಷಣವಿದ್ದರೆ ಈ ಕೆಳಗಿನ ತಾಲೂಕು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು.

ಡಾ.ಸುಜಯ್ ಕುಮಾರ್, ಮಂಗಳೂರು(9535566850).

ಡಾ.ದೀಪ ಪ್ರಭು ಕೆ.ಪಿ, ಬಂಟ್ವಾಳ(9845838677)

ಡಾ.ಕಲಾಮಧು, ಬೆಳ್ತಂಗಡಿ(9845967576)

ಡಾ.ಅಶೋಕ್ ಕುಮಾರ್ ರೈ, ಪುತ್ತೂರು(9448445853)

ಡಾ.ಸುಬ್ರಹ್ಮಣ್ಯ ಎಂ.ಆರ್, ಸುಳ್ಯ(9449662224)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net