ಬಾಲ್ಯದಲ್ಲಿ ನಾವು ಸ್ನೇಹಿತರಾಗಿದ್ದೆವು

nia
Published on

ಶಿವಮೊಗ್ಗ: ಶಂಕಿತ ಭಯೋತ್ಪಾದಕ ಅಬ್ದುಲ್ ಮತಿನ್ ಕ್ರಿಪ್ಟೊ ಕರೆನ್ಸಿ ಬಳಕೆ ಮಾಡುತ್ತಿದ್ದ. ಕರೆನ್ಸಿಗೆ ಸಾಯಿ ಪಿಎ ಯೂಸರ್ ನೇಮ್ ಕೊಟ್ಟಿದ್ದ. ಜತೆಗೆ ಬಾಲ್ಯದಲ್ಲಿ ನಾವು ಸ್ನೇಹಿತರಾಗಿದ್ದೆವು. ನನ್ನ ಮೊದಲೆರಡು ಅಕ್ಷರಗಳು ಕ್ರಿಪ್ಟೊ ಕರೆನ್ಸಿಯ ಯೂಸರ್ ನೇಮ್ ಆಗಿದ್ದ ಶಂಕೆ ಮೇಲೆ ನನ್ನನ್ನೂ ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು ಎಂದು ಸಾಯಿ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಮತೀನ್ ಮತ್ತು ಮುಜಾವಿಲ್ ಆರೋಪಿಗಳು. ಅವರು ಆ್ಯಪ್ ಬಳಕೆ ವಿಚಾರದಲ್ಲಿ ಸಾಯಿ ಪಿಎ ಎಂಬ ಹೆಸರನ್ನು ಯೂಸರ್ ನೇಮ್ ಆಗಿ ಬಳಸಿದ್ದರಿಂದ ಎನ್‌ಐಎಗೆ ವಿಚಾರಣೆಗೆ ಕರೆದಿತ್ತು. ಮೊಬೈಲ್ ಅಂಗಡಿ ಮಾಲೀಕ ಸಬೀಲ್, ನಜೀರ್ ಮತ್ತು ನವೀದ್ ಎಂಬುವರು ಸ್ನೇಹಿತರಾಗಿದ್ದು ಅವರಿಗೂ ಮತ್ತು ಮತಿನ್ ನಡುವೆ ಏನು ವರ್ಗಾವಣೆ ನಡೆದಿದೆ ಎಂಬುದು ಗೊತ್ತಿಲ್ಲ. ಆದರೆ ನಾನು ಮತ್ತು ನನ್ನ ಸಹೋದರನನ್ನು ಎನ್‌ಐಎ ವಿಚಾರಣೆ ಮಾಡಿ ಕಳಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net