೨೭ ರಂದು ಕೊಡವ ಆಲ್ಬಮ್ ಸಾಂಗ್ ಲೋಕಾರ್ಪಣೆ

IMG_20221125_123853-01 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ


ಟೀಮ್ ವಿ ಟ್ರೈಬ್ಸ್ ನಿರ್ಮಾಣದ ಲೇಲುಳ್ಳಿ ಲೇ ಲೇ ಕೊಡವ ವಿಡಿಯೋ ಆಲ್ಬಮ್ ಸಾಂಗ್ ನ.೨೭ ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಚಿತ್ರ ಸಾಹಿತಿ ಅಜ್ಜಮಾಡ ಅಭಿಷೇಕ್ ಬಿದ್ದಪ್ಪ ಹೇಳಿದ್ದಾರೆ.

ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಕೊಡವ ಪ್ರೀಮಿಯರ್ ಲೀಗ್ ಪಂದ್ಯಾವಳಿ ಸಂದರ್ಭ ೩ ಗಂಟೆ ಗೆ ವೆಬ್‌ಸೈಟ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಲಾಗುವುದೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೊಡಗಿನ ಪ್ರಕೃತಿ ಸೌಂದರ್ಯ, ಕೊಡವರ ಸಂಸ್ಕೃತಿ, ಆಚಾರ- ವಿಚಾರ, ವೀರ ಯೋಧರ ಪ್ರತಿಮೆಗಳ ಮುಂದೆ ಚಿತ್ರೀಕರಣ ಮಾಡಲಾಗಿದೆ. ಕೊಡವ ಮತ್ತು ಕೊಡಗಿನ ವೀರ ಯೋಧರ ತ್ಯಾಗ, ಬಲಿದಾನವನ್ನು ಹಾಡಿನಲ್ಲಿ ಬಿಂಬಿಸಲಾಗಿದ್ದು, ಯುವ ಪೀಳಿಗೆ ಸೇನೆಗೆ ಸೇರಲು ಮತ್ತು ಕೊಡಗಿ ನ ಬಗ್ಗೆ ಅಭಿಮಾನ ಮೂಡಲು ಪ್ರೇರಣೆಯಾಗಲಿದೆ ಎಂದಿದ್ದಾರೆ.

ಅಜ್ಜಮಾಡ ಅಭಿಷೇಕ್ ಬಿದ್ದಪ್ಪ ಸಾಹಿತ್ಯ ರಚನೆ ಮಾಡಿದ್ದಾರೆ. ಮಚ್ಚಂಡ ಶರಣ್ ಅಯ್ಯಪ್ಪ, ಅಜ್ಜಮಾಡ ಅಭಿಷೇಕ್ ಬಿದ್ದಪ್ಪ, ಪ್ರಿಯಾ ಯಾದವ್ ಹಾಡಿದ್ದಾರೆ. ಕೊಡಗಿನ ೭೫ ಕ್ಕೂ ಹೆಚ್ಚು ಕಲಾವಿದರು ಹೆಜ್ಜೆಹಾಕಿದ್ದಾರೆ. ಕಾರ್ತಿಕ್ ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಿಕ್ಸಿಂಗ್ ಅಂಡ್ ಮಾಸ್ಟರಿಂಗ್ ಅನ್ನು ಕ್ರಿಸ್ಟೋಫರ್, ಸಿಮಾಟೋಗ್ರಫರ್ ಆಗಿ ಬಿಡದಿ ನಾಗೇಶ್, ಎಡಿಂಗ್ ವಿರಾಜಪೇಟೆಯ ಸಂಕೇತ್ ಸ್ಟುಡಿಯೋ ಹಾಗೂ ಡಬ್ಬಿಂಗ್ ವಿರಾಜಪೇಟೆಯ ಮೋಹನ್ ಸ್ಟುಡಿಯೋದಲ್ಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವಿ ಟ್ರೈಬ್ಸ್ ವಿಥ್ ಪಾಸಿಟಿವ್ ವೈಬ್ಸ್ ಒಕ್ಕೂಟದ ಸದಸ್ಯರ ಪ್ರಥಮ ಪ್ರಯತ್ನ ಇದಾಗಿದೆ. ಮಡಿಕೇರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ, ಮೇಜರ್ ಮಂಗೇರಿರ ಮುತ್ತಣ್ಣ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಪ್ರತಿಮೆ, ವಿರಾಜಪೇಟೆಯಲ್ಲಿರುವ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಪ್ರತಿಮೆ ಎದುರು ಚಿತ್ರೀಕರಣ ಮಾಡಲಾಗಿದೆ. ಗೋಣಿಕೊಪ್ಪ, ಕಕ್ಕಬ್ಬೆ, ವಿರಾಜಪೇಟೆ, ಚೇಲಾವರ, ಕಬ್ಬೆಕುಂದ್, ಪೊನ್ನಂಪೇಟೆ, ಕಾನೂರು, ಕಾಕೋಟ್‌ಪರಂಬು ಸೇರಿದ್ದಂತೆ ಕೊಡಗಿನ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ ಎಂದರು.

ಮತ್ರಂಡ ಸ್ಯಾಮ್ ಪೂವಪ್ಪ, ಅಯ್ಯರಣಿಯಂಡ ಶಿಲನ್ ಚೋಂದಮ್ಮ, ಐಯ್ಯೆಟ್ಟಿರ ಮಿಥುನ್ ಮೇದಪ್ಪ, ಐಮಣಿಯಂಡ ನವೀಣ್, ಪೆಮ್ಮಂಡ ರೋಷನ್ ಪೆಮ್ಮಯ್ಯ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net