ಬಿಜೆಪಿ ಜತೆ ಮೈತ್ರಿಗೆ ನಮ್ಮ ಬೆಂಬಲವಿದೆ: ಕೆ.ಬಿ.ಪ್ರಸನ್ನಕುಮಾರ್

MLA Prasannakumar
Published on

ಶಿವಮೊಗ್ಗ: ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿಯೊಂದಿಗಿನ ಮೈತ್ರಿಗೆ ಕೋರ್ ಕಮಿಟಿ ಒಪ್ಪಿಗೆ ದೊರೆತಿದ್ದು ಕಾಂಗ್ರೆಸ್ ಮಣಿಸಲು ಮೈತ್ರಿ ನಿರ್ಧಾರವನ್ನು ಬೆಂಬಲಿಸುವುದಾಗಿ ಜೆಡಿಎಸ್ ಕೋರ್ ಕಮಿಟಿ ಸದಸ್ಯ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದರು.

ನಿರ್ಧಾರವನ್ನು ಬೆಂಬಲಿಸುವುದಾಗಿ ಜೆಡಿಎಸ್ ಕೋರ್ ಕಮಿಟಿ ಸದಸ್ಯ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದರು.
ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿA ನೇತೃತ್ವದಲ್ಲಿ ಬೆಂಗಳೂರಿನ ಅರಮನೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಜತೆ ಕೈಜೋಡಿಸಲು ತೀರ್ಮಾನಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೋರ್ ಕಮಿಟಿ ತೀರ್ಮಾನಕ್ಕೆ ಜಿ¯್ಲೆಯ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ನಿರ್ಧಾರವನ್ನು ಬೆಂಬಲಿಸಲು ಮುಖಂಡರು, ಕಾರ್ಯಕರ್ತರು ಸಮ್ಮತಿಸಿದ್ದಾರೆ. ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಿದ್ದೇವೆ ಎಂದರು.
ಸ್ಮಾರ್ಟ್ಸಿಟಿ ಕಾಮಗಾರಿಯಿಂದ ನಗರದ ಜನ ರೋಸಿ ಹೋಗಿz್ದÁರೆ. ಈ ಕಾಮಗಾರಿಯನ್ನು ಪ್ರಶ್ನಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ತನಿಖೆಗೆ ಆದೇಶಿz್ದÁರೆ. ಆದರೆ ಆಡಿಟ್ ತನಿಖೆ ಆಗಬೇಕು ಎಂದು ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದರು.
ಶಿವಮೊಗ್ಗ ಜಿ¯್ಲÉ ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿದೆ. ಅಽಕಾರಿಗಳು ಯುದ್ಧೋಪಾವಽಯಲ್ಲಿ ಕೆಲಸ ಮಾಡುವಂತೆ ಕಾರ್ಯೋನ್ಮುಖರಾಗಬೇಕು. ಅಽಕಾರಿಗಳು ದೊಡ್ಡಮಟ್ಟದ ಹಣ ಕೊಟ್ಟು ಅಽಕಾರದಲ್ಲಿರುವುದಾಗಿ ಎಲ್ಲ ಇಲಾಖೆಯಲ್ಲೂ ಕೇಳಿಬರುತ್ತಿದೆ. ಜಿಲ್ಲಾಽಕಾರಿ ಡಾ.ಆರ್.ಸೆಲ್ವಮಣಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಗಮನ ಹರಿಸಿ ಲಂಚ ಮುಕ್ತವಾಗಿ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಕೆ.ಎನ್.ರಾಮಕೃಷ್ಣ, ದಾದಾಪೀರ್, ಅಬ್ದುಲ್ ವಾಜೀದ್, ಆಯನೂರು ಶಿವಾನಾಯ್ಕ, ತ್ಯಾಗರಾಜ್, ಕಡಿದಾಳ್ ದಿವಾಕರ್, ಎಸ್.ವಿ. ರಾಜಮ್ಮ, ಗೀತಾ ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net