ಪ್ರೀತಿ, ಸಹಬಾಳ್ವೆಯಿಂದ ಬದುಕಬೇಕು

23ATHANIGRAMIN2
Published on

ಅಥಣಿ ಗ್ರಾಮೀಣ: ಕಾಯಕದ ಜತೆ ದೇವರ ನಾಮಸ್ಮರಣೆ, ಪೂಜೆ ಅಳವಡಿಸಿಕೊಳ್ಳಬೇಕು ಎಂದು ಕಕಮರಿ ಶ್ರೀ ರಾಯಲಿಂಗೇಶ್ವರ ಮಠದ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಹೇಳಿದರು.

ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದ ಶ್ರೀ ಅಕ್ಕಮಹಾದೇವಿ ಆಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಧನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರಾವಣ ಮಾಸದಲ್ಲಿ ಉತ್ತಮ ಸಂದೇಶ ಕೇಳುವ ಸಂಪ್ರದಾಯ ಇನ್ನೂ ಹಚ್ಚು ಹಸುರಾಗಿರುವದು ಭಾರತೀಯ ಸಂಸತಿಯ ದೋತಕವಾಗಿದೆ. ಗುರು, ತಂದೆ&ತಾಯಿ ಋಣ ತೀರಿಸುವುದು ಪ್ರತಿಯೊಬ್ಬನ ಕರ್ತವ್ಯ. ಸದಾ ಧರ್ಮ, ದೇವ ಕಾರ್ಯದಲ್ಲಿ ಪಾಲ್ಗೊಂಡು ಸತ್ಯ, ಅಹಿಂಸೆ, ಪ್ರೀತಿ, ಸಹಬಾಳ್ವೆಯಿಂದ ಬದುಕಬೇಕು ಎಂದರು.

ಬ್ಯಾಕೂಡದ ಸಂಗಪ್ಪ ಶರಣರು ಮಾತನಾಡಿ,  ನಿಜವಾದ ನೆಮ್ಮದಿ ಹಿರಿಯರ ಸೇವೆ ಧರ್ಮಗ್ರಂಥಗಳ ಅಧ್ಯಯನದಲ್ಲಿ ಅಡಗಿದೆ ಎಂದರು.

ಕೆ.ಡಿ.ಪಾಟೀಲ, ಗುರುರಾಜ ನಾಳಮಠ, ಬಾವುರಾಜ ಮಹಾರಾಜರು, ಅಣ್ಣಪ್ಪ ಶರಣರು, ಮಲ್ಲಪ್ಪ ಶರಣರು, ಅಪ್ಪಾಸಾಹೇಬ ಶರಣರು, ಶಿವನಿಂಗ ಶಿರಿಗಿರಿ, ಕಲ್ಮೇಶ ಕಲಮಡಿ ಇತರರಿದ್ದರು.

23ಅಥಣಿಗ್ರಾಮೀಣ2: ಅಡಹಳ್ಳಟ್ಟಿ ಗ್ರಾಮದ ಶ್ರೀ ಅಕ್ಕಮಹಾದೇವಿ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಸಾಧನ ಸಪ್ತಾಹ ಕಾರ್ಯಕ್ರಮದಲ್ಲಿ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಮಾತನಾಡಿದರು. ಸಂಗಪ್ಪ ಶರಣರು, ಬಾವುರಾಜ ಮಹಾರಾಜರು, ಅಣ್ಣಪ್ಪ ಶರಣರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net