

ನೇಸರಗಿ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಜಗತ್ತಿಗೆ ಬೆಳಕು ನೀಡುವಂತವರಾಗಬೇಕು ಎಂದು ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸಂಸತರಾಗಿ ಬಾಳಬೇಕು ಎಂದರು.
ಎಸ್ಡಿಎಂಸಿ ಸದಸ್ಯ ಸೋಮಶೇಖರ ಮಾಳಣ್ಣವರ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾಲಕರು ಮತ್ತು ಶಿಕರ ಪಾತ್ರ ಅವಶ್ಯವಾಗಿದೆ ಎಂದು ಹೇಳಿದರು.
ಮುಖ್ಯ ಶಿಕಿ ಸುನಂದಾ ದಾಸರ ಮಾತನಾಡಿದರು. ಗ್ರಾಪಂ ಅಧ್ಯ ವೀರಭದ್ರ ಚೋಬಾರಿ, ಎಸ್ಡಿಎಂಸಿ ಅಧ್ಯ ರುದ್ರಪ್ಪ ಮದವಾಲ, ಸೋಮಶೇಖರ ಮಾಳಣ್ಣವರ, ಮಲ್ಲಿಕಾರ್ಜುನ ಗೌಡರ, ಅಡಿವೆಪ್ಪ ಹೊಸಮನಿ, ಹಿರಿಯರಾದ ಕೆಂಚಪ್ಪ ಮದವಾಲ, ಎಚ್.ಐ.ಬೆಳವಣಕಿ, ನಾಗರಾಜ ಬೆಣ್ಣಿ, ಮಾರುತಿ ದಾಸರ, ಎಂ ಎಸ್.ಹಳ್ಳದಕೇರಿ, ವಿ.ಜಿ.ಕೌಜಲಗಿ, ಶ್ರೀದೇವಿ ಹಿರೇಮಠ, ರೀಟಾ ಜೆ., ಎಂ.ಎಸ್.ಹಳ್ಳದಕೇರಿ, ಡಿ.ಜಿ.ಪಾಟೀಲ, ಸವಿತಾ ಚೋಬಾರಿ, ರತ್ನವ್ವ ಪೂಜೇರಿ ಇದ್ದರು.