

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಗದಗದಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಹಿನ್ನೆಲೆಯಲ್ಲಿ,ನೂತನ ಜಿಲ್ಲಾಧಿಕಾರಿ ದಿವ್ಯಾ,ಧ್ವಜಾರೋಹಣ ನೆರವೇರಿಸುವ ಗೌರವಕ್ಕೆ ಪಾತ್ರರಾದರು.
ಲಿಖಿತ ಭಾಷಣ ಬದಿಗಿರಿಸಿ ಮಾತನಾಡಿದ ಜಿಲ್ಲಾಧಿಕಾರಿ,ನಮ್ಮ ಭಾಷೆ,ಸಂಸ್ಕೃತಿ,ಪರಂಪರೆ ಮೌಲ್ಯ,ಶ್ರೀಮಂತಿಕೆಯ ಅರಿವು ನಮ್ಮಲ್ಲಿ ಇರಬೇಕು. ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಅತ್ಯಂತ ಸಮೃದ್ಧ,ಸುಂದರ ಭಾಷೆ,ಕರ್ನಾಟಕ ಪ್ರಾಕೃತಿಕ ಸಂಪನ್ಮೂಲ ಗಳಿಂದ ಕೂಡಿರುವ ಸೊಬಗಿನ ರಾಜ್ಯವೆಂದು, ಗುಜರಾತ್‌ಮೂಲ,ತಮಿಳುನಾಡು ನಿವಾಸಿಯಾಗಿದ್ದ ದಿವ್ಯಾ,ಕರ್ನಾಟಕ ಹಾಗೂ ಕೋಟೆ ನಾಡು ಚಿತ್ರದುರ್ಗ ಐತಿಹ್ಯ,ಸಾಹಿತ್ಯ,ಸಾಂಸ್ಕೃತಿಕ,ಸೊಬಗು ಪರಂಪರೆಗೆ ಬೆರಗು ವ್ಯಕ್ತಪಡಿಸಿದರು.
14 ಮಂದಿ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಜಿಲ್ಲಾಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಶಾಸಕ ಜಿ. ಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಎಸ್‌ಪಿ ಕೆ.ಪರಶುರಾಮ್,ಎಡಿಸಿ ಇ.ಬಾಲಕೃಷ್ಣ,ಜಿಪಂ ಸಿಇಒ ಎಂ.ಎಸ್.ದಿವಾಕರ್,ಎಸಿ ಆರ್.ಚಂದ್ರಯ್ಯ,ತಹಸೀಲ್ದಾರ್ ಸತ್ಯನಾರಾಯಣ,ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮತ್ತಿತರರು ಇದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ನಡೆಸಿಕೊಟ್ಟರು.
ಅದ್ಧೂರಿ ಮೆರವಣಿಗೆ
ರಾಜ್ಯೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭವಾದ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಅದ್ಧೂರಿ ಮೆರವಣಿಗೆಗೆ,ಡಿಸಿ ನೂತನ ಜಿಲ್ಲಾಧಿಕಾರಿ ಡೊಳ್ಳು ಭಾರಿಸುವುದರ ಮೂಲಕ ಚಾಲನೆ ನೀಡಿದರು. ಎಸ್ಪಿ, ಕೆ. ಪರುಶುರಾಮ್,ಎಡಿಸಿ ಇ.ಬಾಲಕೃಷ್ಣ,ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಅವರೊಂದಿಗೆ ಡಿಸಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮೆರವಣಿಗೆ ಗಾಂಧಿ ವೃತ್ತ,ಎಸ್‌ಬಿಐ ವೃತ್ತ,ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ಒನಕೆ ಓಬವ್ವ ವೃತ್ತದ ಮೂಲಕ ಜಿಲ್ಲಾ ಪೊಲೀಸ್ ಕವಾಯತು ಮೈದಾನವನ್ನು ತಲುಪಿತು.
ಡೊಳ್ಳು,ಕರಡಿ ಮಜಲು,ಕಹಳೆ,ತಮಟೆ,ಬಾರಿಸುವ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ನರ್ಸಿಂಗ್ ವಿದ್ಯಾರ್ಥಿಗಳು ಆರೋಗ್ಯ ಸುರಕ್ಷತೆ,ಕುಟುಂಬ ಯೋಜನೆ ಭಿತ್ತಿ ಪತ್ರಗಳನ್ನಿಡಿದು ಸಾಗಿದರು. ಆತ್ಮರಕ್ಷಣೆ ಕಲೆ ಮೈಗೂಡಿಸಿಕೊಳ್ಳುತ್ತಿರುವ ವಿದ್ಯಾರ್ಥಿನಿಯ ರೊಂದಿಗೆ ವಿವಿಧ ಶಾಲಾ,ಕಾಲೇಜು ವಿದ್ಯಾರ್ಥಿಗಳಿದ್ದರು. ವಿವಿ ಸ್ತಬ್ಧ ಚಿತ್ರಗಳು ಗಮನ ಸೆಳೆದವು.
ಡಿಡಿಪಿಐ ರವಿಶಂಕರ್‌ರೆಡ್ಡಿ, ಎಎಸ್ಪಿ ಕುಮಾರಸ್ವಾಮಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್,ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ಲೋಕೇಶ್ವರಪ್ಪ,ಅಂಗವಿಕಲರ ಕಲ್ಯಾಣಧಿಕಾರಿ ವೈಶಾಲಿ ಮತ್ತಿತರು ಇದ್ದರು.