ಮಕ್ಕಳಿಗೆ ನಮ್ಮ ಆಚರಣೆ, ಸಂಸ್ಕಾರಗಳನ್ನು ಬೆಳಸಬೇಕು

sid
Published on

ವಿಜಯವಾಣಿ ಸುದ್ದಿಜಾಲ ಗೋಳಿಯಂಗಡಿ

ಮಕ್ಕಳಿಗೆ ಬ್ಯಾಲ್ಯದಲ್ಲೇ ನಮ್ಮ ಆಚರಣೆಗಳು, ಗುರು ಹಿರಿಯರನ್ನು ಗೌರವಿಸುವಂತಹ ಶ್ರೇಷ್ಠ ಸಂಸ್ಕಾರಗಳನ್ನು ಬೆಳೆಸಬೇಕು. ಭಗವಂತನ ಆರಾಧನೆಯಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮುದ್ದು ಕೃಷ್ಣ ಮುದ್ದು ರಾಧೆ ವೇಷತೊಟ್ಟ ಮಕ್ಕಳಲ್ಲಿ ಸಾಕ್ಷಾತ್ ದೇವರ ಸ್ವರೂಪವನ್ನು ಕಾಣಬಹುದು ಎಂದು ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ವಾಜಿ ಅಧ್ಯಕ್ಷ, ನಿವೃತ್ತ ಶಿಕ್ಷಕ ವೈ.ಪಟ್ಟಾಭಿರಾಮ ಭಟ್ ಮರೂರು ಹೇಳಿದರು.

ಗೋಳಿಯಂಗಡಿ ಶ್ರೀ ಅನ್ನಪೂರ್ಣೇಶ್ವರಿ ಸದಾಶಿವ ಸಿದ್ದಿವಿನಾಯಕ ದೇವಳದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶ್ವ ಹಿಂದು ಪರಿಷತ್, ಬಜರಂಗ ದಳ ಕುಂದಾಪುರ ಪ್ರಖಂಡ ಗೋಳಿಯಂಗಡಿ ಟಕದ ವತಿಯಿಂದ ಹಮ್ಮಿಕೊಂಡ ಮುದ್ದು ಕೃಷ್ಣ- ಮುದ್ದು ರಾಧೆ ‘ಶ್ರೀಕೃಷ್ಣೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತಕುವಾರ್ ಶೆಟ್ಟಿ ಬೆಳ್ವೆ, ಅವರ್ಸೆ ಗ್ರಾಮ ಪಂಚಾಯಿತಿ ವಾಜಿ ಅಧ್ಯಕ್ಷ ಪ್ರಮೋದ್ ಹೆಗ್ಡೆ ಹಿಲಿಯಾಣ, ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್ ಉಪಾಧ್ಯಕ್ಷ ವೈ.ವಿಜಯಕುವಾರ್ ಶೆಟ್ಟಿ ಗೋಳಿಯಂಗಡಿ, ಉಡುಪಿ ಜಿಲ್ಲೆ ಗ್ರಾಮ ವಿಕಾಸ ಶಿಕ್ಷಾ ಮತ್ತು ಸಂಸ್ಕಾರ ಸಂಯೋಜಕಿ ಉಷಾ ಪಿ.ಶೆಟ್ಟಿ, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಸಂಜೀವ ಆರ್ಡಿ, ವಿಹಿಂಪ ಗೋಳಿಯಂಗಡಿ ಟಕ ಅಧ್ಯಕ್ಷ ನಾರಾಯಣ ನಾಯ್ಕ ಯಳಂತೂರು, ಗೋಳಿಯಂಗಡಿ ಟ್ಯಾಕ್ಸಿಮೆನ್ ಅಸೋಸಿಯೇಶ್ ಟಕದ ಅಧ್ಯಕ್ಷ ವ್ನಿೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಶ್ರೀಕೃಷ್ಣೋತ್ಸವ ಕಾರ್ಯಕ್ರಮದಲ್ಲಿ ಮುದ್ದು ಕೃಷ್ಣ- ರಾಧೆ ವೇಷಭೂಷಣ ತೊಟ್ಟು ಭಾಗವಹಿಸಿದ ಎಲ್ಲ ಮಕ್ಕಳಿಗೆ ಬಹುವಾನ ವಿತರಿಸಲಾಯಿತು.

ವೈ.ವಿಜಯಕುವಾರ್ ಶೆಟ್ಟಿ ಗೋಳಿಯಂಗಡಿ ಸ್ವಾಗತಿಸಿದರು. ಶಿಕ್ಷಕ ನಾರಾಯಣ ನಾಯ್ಕ ಗೋಳಿಯಂಗಡಿ ಕಾರ್ಯಕ್ರಮ ನಿರೂಪಿಸಿದರು. ಉದಯ ಜನನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net