ನಾವು ಮಹದಾಯಿ ಹೋರಾಟದ ಪರ

chandrashekar shivacharya swami
Published on

ಬೆಳಗಾವಿ: ಕೆಲ ಸಂಘಟಕರು ನಮ್ಮ ಬಳಿ ಬಂದು ಪರಿಸರ ರಕ್ಷಣೆ ಮಾಡುವ ಕುರಿತು ರ‌್ಯಾಲಿ ಆಯೋಜಿಸಲಾಗಿದೆ. ಎಲ್ಲ ಸಮಾಜದ ಸ್ವಾಮೀಜಿಗಳಿಗೆ ಆಹ್ವಾನ ಕೊಟ್ಟಿದ್ದೇವೆ. ನೀವು ಬಂದು ಭಾಗವಹಿಸಬೇಕು ಎಂದು ಆಹ್ವಾನಿಸಿದ್ದರು. ಪರಿಸರ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದು ಒಂದು ಕ್ಷಣವೂ ಯೋಚಿಸದೆ ರ‌್ಯಾಲಿಯಲ್ಲಿ ಭಾಗವಹಿಸಿದ್ದೆ. ಆ ರ‌್ಯಾಲಿಯಲ್ಲಿ ಭಾಗಿಯಾದಾಗ, ಆ ರ‌್ಯಾಲಿಯು ಮಹದಾಯಿ ಹೋರಾಟದ ವಿರೋಧವಾಗಿತ್ತು ಎಂದು ಗೊತ್ತಾದ ತಕ್ಷಣ ಅಲ್ಲಿಂದ ಹೊರಟುಬಿಟ್ಟೆವು. ನಾಡು, ನುಡಿ, ಜಲದ ವಿಚಾರವಾಗಿ ಹೋರಾಟ ಮಾಡಿಕೊಂಡ ಬಂದ ನಾನು ಮಹದಾಯಿ ಹೋರಾಟದ ಪರವಾಗಿದ್ದೇನೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೀಡಿ ಎಂದು ಹೇಳಿದ್ದಾರೆ. ಸಂಘಟಕರು ನಮಗೆ ದಿಕ್ಕು ತಪ್ಪಿಸುವಂತೆ ಮಾಡಿದ್ದರು. ಪೂರ್ವಾಪರ ವಿಚಾರಿಸದೆ ನಾವು ಅಲ್ಲಿಗೆ ಹೋಗಬಾರದಿತ್ತು. ಆ ವಿಷಯದ ಬಗ್ಗೆ ನಮಗೆ ಅಸಮಾಧಾನವಿದೆ. ಅದಕ್ಕೆ ವಿಷಾದಿಸುತ್ತೇವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net