

ಶಿವಮೊಗ್ಗ: ಕಾಡಾನೆ ಸ್ಥಳಾಂತರಿಸದ ಅರಣ್ಯ ಇಲಾಖೆ ವಿರುದ್ಧ ಸಿಡಿದೆದ್ದು ಉಸ್ತುವಾರಿ ಮಂತ್ರಿ ಮುಂದೆ ರೈತನ ಮೃತದೇಹವನ್ನು ಇಟ್ಟಿದ್ದೇವು. ಅದನ್ನು ನೋಡಿದ್ದ ಅಂದಿನ ಜಿಲ್ಲಾ ಮಂತ್ರಿ ಜೆ.ಎಚ್.ಪಟೇಲ್ ಗಾಬರಿಯಾಗಿದ್ದರು ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ಹೇಳಿದರು.
ಅದೇ ದಿನ ಸ್ಥಳಕ್ಕೆ ಸಿಸಿಎಫ್ ಸೇರಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಸಿ ಕಾಡಾನೆಗಳ ಸ್ಥಳಾಂತರಕ್ಕೆ ಆದೇಶಿಸಿದ್ದರು. ಅಂತಹ ಗಡಸುತನ ಇಂದಿನ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಬೇಕು. ಇಂದಿನ ಜಿಲ್ಲಾ ಮಂತ್ರಿ ಇನ್ನೂ ಬಚ್ಛಾ ಇದ್ದಾನೆ. ಆತ ಮನಸ್ಸು ಮಾಡಿದರೆ ಅಧಿಕಾರಿಗಳನ್ನು ಕರೆಯಿಸಿ ಆನೆಗಳ ಸ್ಥಳಾಂತರಿಸಬೇಕು. ರೈತರು ತಿರುಗಿ ಬಿದ್ದರೆ ಅಧಿಕಾರಿಗಳಿಗೆ ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.