ಎಸ್​ಐಟಿ ರಚಿಸುವ ಭರವಸೆ ಇಟ್ಟುಕೊಂಡಿದ್ದೇವೆ

BOMMAI
Published on

ಹುಬ್ಬಳ್ಳಿ: ಹಾವೇರಿ ಜಿಲ್ಲೆ ಹಾನಗಲ್ಲ್​ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್​ರಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ. ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಿ ತನಿಖೆ ನಡೆಸಲು ಒತ್ತಾಯಿಸಿದ್ದೇವೆ. ಸೋಮವಾರ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣದ ತನಿಖೆಗೆ ಎಸ್​ಐಟಿ ರಚಿಸುವುದಾಗಿ ಘೊಷಣೆ ಮಾಡುವ ಭರವಸೆ ಇಟ್ಟುಕೊಂಡಿದ್ದೇವೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಸ್ಥಳೀಯರು ಮುಚ್ಚಿಹಾಕಲು ಯತ್ನಿಸಿದ ಪ್ರಯತ್ನ ವಿಫಲವಾಗಿದೆ. ಪೊಲೀಸರು ಸಂತ್ರಸ್ತೆಗೆ ದುಡ್ಡು ಕೊಟ್ಟು, ಆಮಿಷ ತೋರಿಸಿ ದೂರು ಹಿಂದೆ ಪಡೆಯಿರಿ ಎಂಬುದು ಬಹಿರಂಗವಾಗಿದೆ. ಸಂತ್ರಸ್ತೆಯನ್ನು ಬಿಜೆಪಿ ತಂಡ ಭೇಟಿ ಮಾಡುತ್ತದೆ ಎಂಬುದನ್ನು ತಿಳಿದು ಅವಳನ್ನು ಪೋಲಿಸರು ತನಿಖೆಯ ನೆಪದಲ್ಲಿ ಹಾನಗಲ್​ದಿಂದ ಶಿರಸಿಗೆ ಸ್ಥಳಾಂತರ ಮಾಡಿದ್ದಾರೆ. ಹಾಗಾಗಿ ಪೊಲೀಸ್​ರಿಂದ ಬಹಳ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಯೋಧ್ಯೆಗೆ ಭೇಟಿ ನೀಡಬೇಕೆಂವ ಮನಸ್ಸಿದೆ. ಪಕ್ಷದ ವರಿಷ್ಠರು ಹೋಗಬೇಡ ಎಂದಿದ್ದಾರೆ. ಹಾಗಾಗಿ ಅವರು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net