

ರಾಯಚೂರು ಏಮ್ಸ್ ಹೋರಾಟಕ್ಕೆ ಸಂಬAಽಸಿದAತೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಇವರು ಅಗತ್ಯ ಬಿದ್ದರೆ ರಾಜೀನಾಮೆ ನೀಡುವದಾಗಿ ಹೇಳಿದ್ದಾರೆ. ಆದರೆ ಬದ್ದತೆ ಬೇಕಿದೆ ಹೊರತು ರಾಜೀನಾಮೆಯಲ್ಲ ಎಂದು ಹೋರಾಟ ಸಮಿತಿ ಸಂಚಾಲಕ ಅಶೋಕ ಕುಮಾರ ಜೈನ್ ತೀರುಗೇಟು ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಿಂದ ಏಮ್ಸ್ ಮಂಜೂರಾತಿಗೆ ದೆಹಲಿಗೆ ನಿಯೋಗ ಹೋಗುವದಾಗಿ ಅವರೇ ಪ್ರಕಟಿಸಿದ್ದರು. ಕೊಟ್ಟ ಭರವಸೆಯಂತೆ ನಿಯೋಗ ತೆರಳಿಲ್ಲ ಎಂದು ಎಚ್ಚರಿಸುವ ಕೆಲಸ ಹೋರಾಟ ಸಮಿತಿ ಮಾಡಿದೆ. ಆದರೆ ಏಮ್ಸ್ ಮಂಜೂರಾತಿಗೆ ಸಚಿವ ಸಂಪುಟ ತೀರ್ಮಾನಿಸಬೇಕು. ಈ ಹಿಂದೆ ಬಿಜೆಪಿ ಸರ್ಕಾರ ಅಽಕಾರದಲ್ಲಿದ್ದಾಗಲೂ ಸಚಿವ ಸಂಪುಟ ತೀರ್ಮಾನಿಸಬಹುದಿತ್ತು. ರಾಜಕೀಯವಾಗಿ ಏಮ್ಸ್ ಹೋರಾಟವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬಾರದು.
ಏಮ್ಸ್ ಹೋರಾಟ ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಸೇರಿದ್ದಲ್ಲ. ಸಮಗ್ರ ಜಿಲ್ಲೆಯ ಜನರ ಅರೋಗ್ಯಕ್ಕಾಗಿ ಏಮ್ಸ್ ಮಂಜೂರಿಗಾಗಿ ಮೂರು ವರ್ಷದಿಂದ ನಡೆಯುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಎನ್.ಎಸ್.ಬೋಸರಾಜ ಸೇರಿದಂತೆ ಎಲ್ಲಾಪಕ್ಷದ ಶಾಸಕರು,ಹೋರಾಟಗಾರರ ನಿಯೋಗ ದೆಹಲಿಗೆ ತೆರಳಿದ್ದಾಗಲೂಅವರಿದ್ದರು. ಅಂದೇ ಸಚಿವ ಸಂಪುಟದ ತೀರ್ಮಾನವಾಗಬೇಕೆಂದು ಹೇಳಬಹುದಿತ್ತು.
ಅಂದು ಮಾತನಾಡದೇ ಈಗ ರಾಜ್ಯ ಸರ್ಕಾರ ಸಚಿವ ಸಂಪುಟ ತೀರ್ಮಾನವಾಗಬೇಕೆಂದು ಹೇಳುತ್ತಿದ್ದಾರೆ. ಅದೇ ಕಾಳಜಿಯನ್ನು ಸರ್ಕಾರ ಗಮನಸೆಳೆದು ಪ್ರಶ್ನಿಸಬಹದಿತ್ತು. ಏಮ್ಸ್ ಹೋರಾಟಕ್ಕೆ ಎಲ್ಲಾ ಪಕ್ಷದ ಶಾಸಕರುಗಳು,ಗಟ್ಟಿ ಧ್ವನಿಬೇಕಿದೆ. ರಾಜಕೀಯ ತೀಟೆ ತೀರಿಸಿಕೊಳ್ಳಲು ಶಾಸಕರು ಮಾತನಾಡಿದ್ದಾರೆ. ಅವರ ರಾಜೀನಾಮೆ ನಮಗೆ ಬೇಕಿಲ್ಲ. ಅವರ ಸ್ವಯಿಚ್ಚೆ ಬೆಂಬಲ, ಹೋರಾಟಕ್ಕೆ ಬಲಕೊಡಿಸುವ ಕೆಲಸ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಹೋರಾಟಗಾರ ಎಸ್.ಮಾರೆಪ್ಪ, ಜಾನವೆಸ್ಲಿ, ಜಗದೀಶ ಪಾಟೀಲ್, ರಮೇಶ ಕಲ್ಲೂರಕರ್, ಸುಲೋಚನಾ ಸಂಘ, ವಾಸೀ-ï ಇದ್ದರು.