ಸಚಿವ ಸಂತೋಷ ಲಾಡ್ ತಿರುಗೇಟು; ಸಂವಿಧಾನ ತಿದ್ದುಪಡಿಗೆ ಬಿಡುವುದಿಲ್ಲ

11 Dwd 1 (Santosh Lad)
Published on

ಧಾರವಾಡ: ಎಲ್ಲಿಯವರೆಗೆ ಶೋಷಿತ ವರ್ಗದ ಜನರು ಬದುಕಿದ್ದಾರೋ, ಅವರೊಂದಿಗೆ ನಾವಿದ್ದೇವೆ. ಯಾವುದೇ ಕಾರಣಕ್ಕೂ ನಾವು ಸಂವಿಧಾನ ತಿದ್ದುಪಡಿಗೆ ಬಿಡುವುದಿಲ್ಲ. ಸಂವಿಧಾನ ತಿದ್ದುಪಡಿ ಬಗ್ಗೆ ಮಾತನಾಡುವವರಿಗೆ ಜನ ತಕ್ಕ ಪಾಠ ಕಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಅನಂತಕುಮಾರ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿದರು.
ಈ ಚುನಾವಣೆಯಲ್ಲಿ ಗೆದ್ದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಬಿಜೆಪಿಯವರು ಬಹಿರಂಗವಾಗಿ ಹೇಳಲಿ. ಅದನ್ನು ಬಿಟ್ಟು ಒಬ್ಬೊಬ್ಬರ ಕಡೆಯಿಂದ ಒಂದೊAದು ರೀತಯ ಹೇಳಿಕೆ ಕೊಡಿಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಪ್ರಶ್ನಿಸಬೇಕು ಎಂದರು.
ಅನAತಕುಮಾರ ಹೆಗಡೆ ಹೇಳಿಕೆ ಕುರಿತು ಬಿಜೆಪಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆ ವೈಯಕ್ತಿಕ ಎನ್ನುತ್ತಿದ್ದು, ಇದೊಂದು ನಾಟಕ. ಅಂಥವರಿಗೆ ಟಿಕೆಟ್ ನೀಡುತ್ತೀರಾ…? ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದರು.
ಬಿಜೆಪಿ ಅಬ ಕಿ ಬಾರ 400 ಪಾರ್ ಎನ್ನುತ್ತಿದ್ದು, ಮತಪೆಟ್ಟಿಗೆ ಒಡೆದ ಮೇಲೆ ಗೊತ್ತಾಗಲಿದೆ. ಪ್ರಧಾನಿ ಮೋದಿ ಅವರು ಮಾಡಿರುವ ಕೆಲಸಗಳಿಂದ ಬಿಜೆಪಿಯವರಿಗೆ ಲಾಭವಿದೆ. ಬಡ ಹಿಂದುಗಳಿಗೆ 1 ರೂಪಾಯಿ ಲಾಭವಿಲ್ಲ. ಸಾಹುಕಾರ ಹಿಂದುಗಳಿಗೆ ಮಾತ್ರ ಲಾಭವಾಗಿದೆ. ದೇಶದಲ್ಲಿ ಬಡವರು ಬಡವರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net