ಕೈಮುಗಿದು ಕೇಳುವೆವು ನಮಗೂ ನೀರುಕೊಡಿ

Untitled-1
ಕುಣಿಗಲ್​ ಕಾಂಗ್ರೆಸ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಡಾ.ಎಚ್​.ಡಿ.ರಂಗನಾಥ್​ ಮಾತನಾಡಿದರು. ಬ್ಲಾಕ್​ ಕಾಂಗ್ರೆಸ್​ ಅಧ್ಯ ರಂಗಣ್ಣಗೌಡ, ಮಹಿಳಾ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಸುಮತಿ, ಪುರಸಭೆ ಸದಸ್ಯ ದೇವರಾಜು, ಪ್ರಚಾರ ಸಮಿತಿ ಅಧ್ಯ ಶಂಕರ್​, ವಿಎಸ್ಸೆಸ್ಸೆನ್​ ಅಧ್ಯಕ್ಷರಾದ ಬೋರೇಗೌಡ, ಹರೀಶ್​ ಇದ್ದರು.
Published on

ಕುಣಿಗಲ್​: ಲಿಂಕ್​ ಕೆನಾಲ್​ ಮೂಲಕ ಹರಿದು ಬರುವ ಹೇಮಾವತಿ ನೀರು ಕುಣಿಗಲ್​ ತಾಲೂಕಿಗೆ ಮಾತ್ರ ಸೀಮಿತ. ಈ ನೀರನ್ನು ರಾಮನಗರ ಜಿಲ್ಲೆಗೆ ಒಂದು ಹನಿಯಷ್ಟೂ ತೆಗೆದುಕೊಂಡು ಹೋಗುವುದಿಲ್ಲ ಎಂದು ಶಾಸಕ ಡಾ.ಎಚ್​.ಡಿ.ರಂಗನಾಥ್​ ಹೇಳಿದರು.

ತುಮಕೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿರುವ ಕುಣಿಗಲ್​ ತಾಲೂಕಿನ ರೈತರ ಹಿತ ಕಾಯುವುದು ನಮ್ಮ ಕರ್ತವ್ಯವಾಗಿದ್ದು, ಜಿಲ್ಲೆಯ ಎಲ್ಲ ಶಾಸಕರು, ಜೆಡಿಎಸ್​ &ಬಿಜೆಪಿ ಮುಖಂಡರಲ್ಲಿ ಕೈಮುಗಿದು ಕೇಳುವೆ, ಲಿಂಕ್​ ಕೆನಾಲ್​ಗೆ ವಿರೋಧ ಮಾಡದೆ ಸಹಕಾರ ನೀಡಬೇಕು ಎಂದು ಪಟ್ಟಣದಲ್ಲಿನ ಕಾಂಗ್ರೆಸ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರಂಗನಾಥ್​ ಮನವಿ ಮಾಡಿದರು. ಕುಣಿಗಲ್​ ತಾಲೂಕಿನ ಕೊತ್ತಗೆರೆ, ಹುತ್ರಿದುರ್ಗ, ಹುಲಿಯೂರುದುರ್ಗ ಎಡೆಯೂರು, ಅಮೃತ್ತೂರು ಹಾಗೂ ಕಸಬಾ ಹೋಬಳಿಗಳಿಗೆ ಸಮಗ್ರವಾಗಿ ನೀರಾವರಿ ಕಲ್ಪಿಸಲು ಈಗಾಗಲೇ ಯೋಜನೆಗಳನ್ನು ರೂಪಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಲಿಂಕ್​ ಕೆನಾಲ್​ ಕಾಮಗಾರಿ ಮುಗಿದು ನಮ್ಮ ಪಾಲಿನ 3 ಟಿಎಂಸಿ ನೀರು ಹರಿದರೆ ಇಡೀ ತಾಲೂಕು ಹಸಿರುಮಯವಾಗಲಿದೆ. ಬೇಕಾದರೆ ತುಮಕೂರು ಜಿಲ್ಲೆಗೆ ಹರಿಯಬೇಕಾದ 24 ಟಿಎಂಸಿ ಹೇಮೆ ನೀರಿಗಾಗಿ ನಾನೇ ಮುಂದೆ ನಿಂತು ಹೋರಾಟ ಮಾಡುವೇ. ಲಿಂಕ್​ ಕೆನಾಲ್​ ವಿರೋಧಿಸಿ ಪ್ರತಿಭಟಿಸುವುದು ರಾಜಕೀಯ ಲಾಭಕ್ಕಾಗಿ ಮಾತ್ರ.

ಸಂರ್ಷ ಬೇಡ, ಸಹಕರಿಸಿ.. : ಲಿಂಕ್​ ಕೆನಾಲ್​ ಯೋಜನೆ ಅನುಷ್ಠಾನ ಮಾಡದೇ ಹಿಂದೆ ಸರಿಯುವ ಮಾತೇ ಇಲ್ಲ. ಅಗತ್ಯ ಬಂದರೆ ನಾವು ಎಲ್ಲ ಹೋರಾಟಕ್ಕೂ ಸಿದ್ಧರಿದ್ದೇವೆ. ನಮ್ಮ ರೈತರೂ ಸನ್ನದ್ಧರಾಗಿದ್ದಾರೆ. ಅದರೆ ಸಂರ್ಷ ಬೇಡ, ಪರಸ್ಪರ ಪ್ರೀತಿ&ವಿಶ್ವಾಸದಿಂದ ನಡೆದುಕೊಳ್ಳೋಣ. ಲಿಂಕ್​ ಕೆನಾಲ್​ ಯೋಜನೆಗೆ ಸಹಕರಿಸಿ, ನಮ್ಮ ರೈತರಿಗೆ ನೀರು ಕೋಡಿ ಎಂದು ಡಾ.ರಂಗನಾಥ್​ ಮನವಿ ಮಾಡಿದರು.

ಜಿಲ್ಲೆಗೆ ಹೇಮೆ ಹರಿಸಿದ್ದೇ ಕುಣಿಗಲ್​ನವರು : ಜಿಲ್ಲೆಯಲ್ಲಿ ಲಿಂಕ್​ ಕೆನಾಲ್​ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಕೇವಲ ರಾಜಕೀಯ ದುರುದ್ದೇಶವೇ ಹೋರತು ಬೇರೇ ಯಾವುದೇ ಸಕಾರಣವಿಲ್ಲ. ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬರಲು ನಮ್ಮ ತಾಲೂಕಿನ ಹುಚ್ಚಮಾಸ್ತಿಗೌಡರು ಹಾಗೂ ವೈ.ಕೆ.ರಾಮಯ್ಯನವರ ಹೋರಾಟವೇ ಕಾರಣ. ಕಾವೇರಿ ನೀರಾವರಿ ಪ್ರದೇಶದಿಂದ ಕೃಷ್ಣ ನೀರಾವರಿ ಪ್ರದೇಶಕ್ಕೆ ಹೇಮಾವತಿ ನೀರನ್ನು ಹರಿಸಿಕೊಳ್ಳುವಾಗ ಕುಣಿಗಲ್​ ತಾಲೂಕಿನ ರೈತರು ವಿರೋಧ ಮಾಡಲಿಲ್ಲ. ನಮ್ಮ ಪಾಲಿನ 3 ಟಿಎಂಸಿ ನೀರು ಕಳೆದ 25 ವರ್ಷದಿಂದ ನಮಗೆ ಹರಿದಿಲ್ಲ. ಈ ನಿಟ್ಟಿನಲ್ಲಿ ಕೊನೇ ಭಾಗದಲ್ಲಿರುವ ನಮಗೆ ನಮ್ಮ ಪಾಲಿನ ನೀರನ್ನು ಹರಿಸಿಕೊಳ್ಳಲು ಲಿಂಕ್​ ಕೆನಾಲ್​ ಯೋಜನೆ ರೂಪಿಸಲಾಗಿದೆ ಎಂದು ರಂಗನಾಥ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net