ಸರ್ಕಾರ ಹಾಗೂ ಸೈನಿಕರ ಜತೆ ನಾವಿದ್ದೇವೆ

We are with the government and the soldiers.
We are with the government and the soldiers.
Published on

ರಬಕವಿ ಬನಹಟ್ಟಿ : ಪಹಲ್ಗಾಮ್ ಘಟನೆಗೆ ಪ್ರತೀಕಾರವಾಗಿ ಮೋದಿ ನೇತೃತ್ವದ ಸರ್ಕಾರ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ಕೆಲಸ ಮಾಡಿದೆ. ಸರ್ಕಾರಕ್ಕೆ ಹಾಗೂ ನಮ್ಮ ಭಾರತೀಯ ಸೈನಿಕರಿಗೆ ಅಭಿನಂದನೆ ಸಲ್ಲಿಸುವುದರ ಜತೆಗೆ ಸರ್ಕಾರ ಹಾಗೂ ಸೈನಿಕರ ಜತೆ ನಾವಿದ್ದೇವೆ ಎಂಬುದನ್ನು ಹೇಳಬೇಕಾಗಿದೆ ಎಂದು ಹಿಂದುಪರ ಸಂಘಟನೆಗಳ ಮುಖಂಡ ಶಿವಾನಂದ ಗಾಯಕವಾಡ ಹೇಳಿದರು.

ರಾಂಪೂರದ ಗಣಪತಿ ದೇವಸ್ಥಾನದಲ್ಲಿ ಸರ್ಕಾರ ಹಾಗೂ ಭಾರತೀಯ ಸೈನಿಕರಿಗಾಗಿ ಗುರುವಾರ ಹಮ್ಮಿಕೊಂಡ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲರೂ ಸೈನಿಕರ ಜತೆಗಿದ್ದೇವೆ ಎಂಬ ಸಂದೇಶ ನೀಡುವ ಜತೆಗೆ ಸೈನಿಕರ ಮನೋಸ್ಥೈರ್ಯ, ಆರೋಗ್ಯ ನೀಡಲಿ ಎಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮೋದಿಯವರು ಉಗ್ರರನ್ನು ಹುಡುಕಿ ಕೊಲ್ಲುತ್ತೇವೆ ಎಂದು ಹೇಳಿದ್ದರು, ಅದೇ ರೀತಿ ಮಾಡಿದ್ದಾರೆ ಎಂದರು.

ಹಿಂದು ಸಂಘಟನೆ ಮುಖಂಡ ಮಲ್ಲಪ್ಪ ಹೊಸಮನಿ ಮಾತನಾಡಿದರು. ಬಸವರಾಜ ಬಕನೇತ್ತಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಶ್ರೀಶೈಲ ಬೀಳಗಿ, ಪ್ರಧಾನ ಕಾರ್ಯದರ್ಶಿ ರವಿ ಕೊರ್ತಿ, ಮಹೇಶ ಕಮತಗಿ, ಶ್ರೀಶೈಲ ಕೊಪ್ಪದ, ಪ್ರಕಾಶ ಕೊರ್ತಿ, ಮಾದೇವ ಮಸಳಿ, ರಾಜು ಶಿಕ್ಕರಶೆಟ್ಟಿ, ನಗರಸಭೆ ಸದಸ್ಯೆ ರೇಖಾ ಕೊರ್ತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net