

ಅರಟಾಳ: ಗುರು ಅಮೂಲ್ಯ ಜೀವನಾನುಭವ ಧಾರೆಯೆರೆದು ಯುವಶಕ್ತಿಗೆ ಸಂಸ್ಕಾರ ನೀಡಬೇಕಿದೆ ಎಂದು ಇಂಚಗೇರಿ ಮಠದ ಸದ್ಗುರು ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.
ಗ್ರಾಮದ ಭಾವೂಸಾಹೇಬ ಮಹಾರಾಜರ ಅಧ್ಯಾತ್ಮ ಆಶ್ರಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರಾವಣ ಸಾಧನಾ ಸಪ್ತಾಹ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿ, ನಮ್ಮ ಕಷ್ಟಕ್ಕೆ ದೇವರು ಹೊಣೆಯಲ್ಲ. ನಮ್ಮ ಕರ್ಮ ನಮ್ಮನ್ನು ಕಾಡುತ್ತದೆ ಹೊರತು ದೇವರಲ್ಲ. ನಾವು ನಡೆಯುವ ದಾರಿಯೇ ಇದಕ್ಕೆ ಕಾರಣ. ಸದ್ಗುರುವಿಂದ ಅಧ್ಯಾತ್ಮ ಅರಿಯಬೇಕು ಎಂದರು.
ಶಂಕರಪ್ಪ ಮಹಾರಾಜರು ಮಾತನಾಡಿ, ಇಂಚಗೇರಿ ಮಠವು ಜಾತಿ, ಮತ, ಪಂತವೆನ್ನದೆ ನೊಂದವರಿಗೆ ಆಸರೆಯಾಗಿ ಕೆಲಸ ಮಾಡುತ್ತದೆ. ಮಾಹಾದೇವಪ್ಪ ಸ್ವಾತಂತ್ರ‍್ಯ ಹೋರಾಟಗಾರರಾಗಿ ಗೋವಾ ವಿಮೋಚನೆ, ಗೋಹತ್ಯೆ ನಿಷೇಧ, ಭೂದಾನ ಚಳುವಳಿ ಅಲ್ಲದೆ ಅಂತರ್ಜಾತಿ-ಅಂತರಧರ್ಮಿಯ ವಿವಾಹಕ್ಕೆ ಪ್ರೋತ್ಸಾಹ ನೀಡಿದರು ಎಂದರು.
ವಿಜಯಪುರದ ಡಾ.ಭೀಮಾಶಂಕರ ಶರಣರು, ಸುಭಾಸ ಮಹಾರಾಜರು, ಭೀಮಣ್ಣ ಮಹಾರಾಜರು, ಸದಾಶಿವ ಮಹಾರಾಜರು, ಅಪ್ಪಾಸಾಬ ಮಹಾರಾಜರು, ವಿವೇಕಾನಂದ ಮಹಾರಾಜರು, ಇಂದುಮತಿ ತಾಯಿ, ಮನೋಹರ ಸಾಳುಂಕೆ, ಶಿವಲಿಂಗಪ್ಪ ಜಂಬಗಿ, ಹನುಮಂತ ಮಾಡಗ್ಯಾಳ, ದುರಗಪ್ಪ ವಡ್ಡರ, ಸದಾನಂದ ನಾವಿ, ಈಶ್ವರಲಿಂಗ ಕಲಘಟಗಿ, ರಮೇಶ ಜಾಧವ, ಪ್ರಕಾಶ ದಮಡಿ, ಎಂ.ಪಿ.ಪಾಟೀಲ, ಸುರೇಶ ಕಾಂಬಳೆ, ದತ್ತಾತ್ರೇಯ ನಿಂಬಳಕರ, ನಿಂಗಪ್ಪ ಕಾಂಬಳೆ, ಅಣ್ಣಪ್ಪ ಡಂಗಿ ಇತರರಿದ್ದರು.