ಮಸಿ ಬಳಿದ ಪ್ರಕರಣ ತನಿಖೆ ನಡೆಸುತ್ತಿದ್ದೇವೆ

14Kittur1
Published on

ಚನ್ನಮ್ಮನ ಕಿತ್ತೂರು: ಎಂ.ಕೆ.ಹುಬ್ಬಳ್ಳಿಯಲ್ಲಿ ಈಚೆಗೆ ಡಾ.ಬಿ.ಆರ್​. ಅಂಬೇಡ್ಕರ್​ ಭಾವಚಿತ್ರಕ್ಕೆ ಮಸಿ ಬಳಿದ ಪ್ರಕರಣಕ್ಕೆ

ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ ಎಂದು

ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಸ್ಸಿ, ಎಸ್ಟಿ ಜನಾಂಗದ ಕುಂದು&ಕೊರತೆ ಸಭೆಯಲ್ಲಿ ಮಾತನಾಡಿ, ಯಾವುದೇ ದೂರುಗಳಿದ್ದರೆ ಸಾರ್ವಜನಿಕರು ಅಧಿಕಾರಿಗಳಿಗೆ ನೇರವಾಗಿ ತಿಳಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಎಲ್ಲ ಗ್ರಾಮಗಳಲ್ಲಿ ಸಮಸ್ಯೆ ಆಲಿಸಲು ಪ್ರತಿ ತಿಂಗಳು ಕಾನೂನು ತಿಳಿವಳಿಕೆ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದರು.

ಮಿನಿ ವಿಧಾನಸೌಧದ ಎದುರು ಅಂಬೇಡ್ಕರ್​ ಮೂರ್ತಿ ಸ್ಥಾಪಿಸಬೇಕು. ರಾಷ್ಟ್ರೀಯ ಹೆದ್ದಾರಿ ಪಕ್ಕದ ಮದ್ಯದಂಗಡಿಗಳ ಎದುರು ಬಸ್​ ನಿಲುಗಡೆಗೆ ಕಡಿವಾಣ ಹಾಕಬೇಕು. ಪ್ರತಿ ಗ್ರಾಮಗಳಲ್ಲಿ ಪೊಲೀಸ್​ ಸಭೆ ನಡೆಸುವುದು. ಅಕ್ರಮ ಮರಳು ಸಾಗಣೆ, ಅಕ್ರಮ

ಮದ್ಯ ಮಾರಾಟ ತಡೆಗಟ್ಟುವಂತೆ ಸಮುದಾಯದ ಮುಖಂಡರು ಒತ್ತಾಯಿಸಿದರು.

ಪಿಎಸ್​ಐಗಳಾದ ಪ್ರವಿಣ ಗಂಗೋಳ, ಸುಮಾ ಗೋರಬಾಳ, ಜಿಪಂ ಮಾಜಿ ಉಪಾಧ್ಯ ಯಲ್ಲಪ್ಪ ವಕ್ಕುಂದ ಮಾತನಾಡಿದರು. ಪಿಎಸ್​ಐ ಪ್ರವಿಣ ಕೋಟಿ, ಮುಖಂಡರಾದ ಯಲ್ಲಪ್ಪ ವಕ್ಕುಂದ, ಸಂಜು ಲೋಕಾಪೂರ, ರಾಜು ಜಾಂಗಟಿ, ಪ್ರಸಾದ ತಳವಾರ,

ಶ್ರೀನಿವಾಸ ಗುಂಜಿ, ಗೌಡಪ್ಪ ಸಾಲಳ್ಳಿ, ಭೀಮಪ್ಪ ದುರ್ಗನ್ನವರ, ನಾಗಪ್ಪ ಅಸಲನ್ನವರ, ಕಾರ್ತಿಕ ತಳವಾರ,

ಶಿವಾನಂದ ತಳವಾರ, ಮಡಿವಾಳಪ್ಪ ವಕ್ಕುಂದ, ಶಿವಾನಂದ ಚಿನ್ನನ್ನವರ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net