

ರಾಯಚೂರು ಮಂತ್ರಾಲಯದ ಶ್ರೀರಾಘವೇಂದ್ರತೀರ್ಥರ ಪಟ್ಟಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ತಮ್ಮ ಸೌಭಾಗ್ಯ ಎಂದ ಆಂಧ್ರದ ಐಟಿಬಿಟಿ ಸಚಿವ ನಾರಾ ಲೋಕೇಶ್, ತಮ್ಮ ಕುಟುಂಬದ ಎಲ್ಲರೂ ರಾಯರ ಪರಮ ಭಕ್ತರು ಎಂದು ಹೇಳಿದರು.
ಅವರು ಮಂತ್ರಾಲಯದಲ್ಲಿ ಶನಿವಾರ ಆರಂಭಗೊAಡ ಶ್ರೀರಾಘವೇಂದ್ರತೀರ್ಥರ ಪಟ್ಟಾಭಿಷೇಕ ಮಹೋತ್ಸವ ಹಾಗೂ ವರ್ಧಂತಿ ಅಂಗವಾಗಿ ಆಯೋಜಿಸಿರುವ ಶ್ರೀಗುರುವೈಭವೋತ್ಸವದ ಮೊದಲ ದಿನ ಕಾರ್ಯಕ್ರಮದಲ್ಲಿ ಶ್ರೀಮಠದಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಲಿಯುಗದ ಕಲ್ಪತರು ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಅನುಗ್ರಹದಿಂದ ಆಂಧ್ರದಲ್ಲಿ ನಮ್ಮ ಸರ್ಕಾರ ಅಽಕಾರಕ್ಕೆ ಬಂದಿದೆ. ರಾಜ್ಯದ ಜನರು ಸುಖ ಸಮೃದ್ಧಿ ನೆಮ್ಮದಿಯಿಂದ ಇರಬೇಕೆಂಬುದು ನಮ್ಮ ಆಶಯ. ಉತ್ತಮ ಆಡಳಿತದ ಮೂಲಕ ಎಲ್ಲ ಜÁತಿ ಜನಾಂಗದವರ ಹಿತ ಕಾಯಲು ಬದ್ಧ ಎಂದರು.