

ಮೈಸೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಫೆ.19ರಿಂದ ಮಾ.3ರವರೆಗೆ ರಾಜ್ಯಾದ್ಯಂತ ‘ಕರ್ನಾಟಕಕ್ಕಾಗಿ ನಾವು’ ಬೈಕ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾ.ಸ.ಪ್ರವೀಣ್ ಹೇಳಿದರು.
ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಅವರು ಬೆಂಗಳೂರಿನ ದೇವನಹಳ್ಳಿಯಲ್ಲಿ ಫೆ.19ರಂದು ಜಾಥಾಗೆ ಚಾಲನೆ ನೀಡಲಿದ್ದಾರೆ. ಈ ಜಾಥಾ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಫೆ.21ರಂದು ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನ ತಲುಪಿದೆ. ಜಾಥಾದಲ್ಲಿ ಮೈಸೂರಿನ 200ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಮಾ.3ರಂದು ತುಮಕೂರಿನ ನೆಲಮಂಗಲದಲ್ಲಿ ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಕ್ಷದ ಮುಖಂಡರಾದ ರಾಜೇಂದ್ರ, ಡಿ.ಪಿ.ಕೆ.ಪರಮೇಶ್, ರಾಜೇಗೌಡ, ರವಿ ಕೋಟೆ ಹುಂಡಿ, ಶಶಾಂಕ್ ಇದ್ದರು.