ಶಿಕ್ಷಣದ ಕೊರತೆಯಿಂದ ನಾವು ಹಿಂದೆ: ಶಾಸಕ ಅಶೋಕ್ ರೈ ಅಭಿಪ್ರಾಯ

Ism_Education (1)
Published on

ಪುತ್ತೂರು ಗ್ರಾಮಾಂತರ: ಬೇರೆ ದೇಶಗಳಿಗೆ ಹೋಲಿಸಿದರೆ ನಾವು 150 ವರ್ಷಗಳಷ್ಟು ಹಿಂದಿದ್ದೇವೆ. ನಮ್ಮಲ್ಲಿ ಕೂತು ತಿನ್ನುವವರ ಪ್ರಮಾಣ ಹೆಚ್ಚಿದೆ. ಇದಕ್ಕೆ ಉತ್ತಮ ಶಿಕ್ಷಣದ ಕೊರತೆಯೇ ಕಾರಣ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಒಳಮೊಗ್ರು ಗ್ರಾಮದ ಕೈಕಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ಸಭಾಭವನಕ್ಕೆ ಶಿಲಾನ್ಯಾಸಗೈದು ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರಿನ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಮಾತನಾಡಿದರು.

ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಒಳಮೊಗ್ರು ಗ್ರಾ.ಪಂ. ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ, ಕೋಶಾಧಿಕಾರಿ ಶ್ರೀಧರ್ ರೈ ಹೊಸಮನೆ, ಎಸ್‌ಡಿಎಂಸಿ ಅಧ್ಯಕ್ಷೆ ಶಿಲ್ಪಾ, ಕಾಮಗಾರಿ ಗುತ್ತಿಗೆದಾರ ನವೀನ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಶತಮಾನೋತ್ಸವ ಸಮಿತಿಯ ಸಂಚಾಲಕ ಸೀತಾರಾಮ ರೈ ಕೈಕಾರ ಪ್ರಸ್ತಾಪಿಸಿದರು. ಸಮಿತಿಯ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಸ್ವಾಗತಿಸಿದರು. ಮುಖ್ಯಶಿಕ್ಷಕ ರಾಮಣ್ಣ ರೈ ಕರ್ನೂರು ವಂದಿಸಿದರು. ಸಂತೋಷ್ ರೈ ಕೈಕಾರ ನಿರೂಪಿಸಿದರು.

ಎಂಆರ್‌ಪಿಎಲ್‌ನಿಂದ 30 ಲಕ್ಷ ರೂ.

ಕೈಕಾರ ಶಾಲೆ 2023ನೇ ಇಸವಿಗೆ ಶತಮಾನ ಕಂಡಿದೆ. ಈ ಸವಿನೆನಪಿಗಾಗಿ 50 ಲಕ್ಷ ರೂ. ವೆಚ್ಚದಲ್ಲಿ ಸಭಾಭವನ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಎಂಆರ್‌ಪಿಎಲ್ ಸಂಸ್ಥೆಯಿಂದ 30 ಲಕ್ಷ ರೂ. ಅನುದಾನ ಸಿಕ್ಕಿದೆ. ಇನ್ನು 20 ಲಕ್ಷ ರೂ. ಅಗತ್ಯವಿದೆ. ಊರಿನ ವಿದ್ಯಾಭಿಮಾನಿಗಳು ಪ್ರೋತ್ಸಾಹಿಸುತ್ತಾರೆ ಎಂಬ ಭರವಸೆಯೊಂದಿಗೆ ಈ ಕೆಲಸಕ್ಕಿಳಿದಿದ್ದೇವೆ. ಮುಂದೆ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಯೋಜನೆಯೂ ಇದೆ ಎಂದು ಶತಮಾನೋತ್ಸವ ಸಮಿತಿ ಸಂಚಾಲಕ ಸೀತಾರಾಮ ರೈ ಕೈಕಾರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net