

ಬೇಲೂರು: 2022-23ನೇ ಸಾಲಿನಲ್ಲಿ ತಾಲೂಕಿನ ನಾರ್ವೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1,74,827 ರೂ, ನಿವ್ವಳ ಲಾಭ ಗಳಿಸಿದ್ದು, ಮುಂದೆಯೂ ಇದೇ ರೀತಿ ಎಲ್ಲರ ಸಹಕಾರದೊಂದಿಗೆ ಮುನ್ನಡೆಯಲಿದೆ ಎಂದು ಅಧ್ಯಕ್ಷ ಸೋಮಯ್ಯ ಹೇಳಿದರು.
ತಾಲೂಕಿನ ನಾರ್ವೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಶುಕ್ರವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾರ್ವೆ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಾರಂಭವಾಗಿ 21 ವರ್ಷ ಕಳೆದಿದೆ. ಈ ಹಿಂದಿನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರ ಹಾಗೂ ಷೇರುದಾರರ ಸಹಕಾರದೊಂದಿಗೆ ಸಂಘವು ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ಜತೆಗೆ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಘ ಮುಂದಡಿ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಪೇಪರ್ ಲೋಟ, ತಟ್ಟೆ ತಯಾರಿಸುವ ಗುರಿ ಹೊಂದಲಾಗಿದೆ ಎಂದರು.
ಇತ್ತೀಚೆಗೆ ಮೃತಪಟ್ಟ ಸಂಘದ ಷೇರುದಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಂಘದಿಂದ ಸನ್ಮಾನಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ಎನ್.ಎಂ.ಶಿವಪ್ರಸಾದ್, ಉಪಾಧ್ಯಕ್ಷ. ಮಧುಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ, ಉಪಾಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯ ಮಂಜುನಾಥ್, ಮಲ್ಲಿಕಾರ್ಜುನ ನಾರ್ವೆ, ಎಫ್‌ಪಿಒ ಅಧ್ಯಕ್ಷ ಸಂಜಯ್, ನಿರ್ದೇಶಕರಾದ ಕೃಷ್ಣೇ ಗೌಡ, ಚಿದಾನಂದ್, ಪ್ರವೀಣ್, ಎಸ್.ವಿ.ದೇವರಾಜ್, ಚೇತನ್‌ಕುಮಾರ್, ಗೀತಾ, ಗೋಪಮ್ಮ, ಚಂದ್ರು, ಮೇಲ್ವಿಚಾರಕ ದಿನೇಶ್ ಕುಮಾರ್, ಕಾರ್ಯನಿರ್ವಣಾಧಿಕಾರಿ ಜ್ಯೋತಿ ಸೇರಿದಂತೆ ಇತರರಿದ್ದರು.