ನಮ್ಮೆಲ್ಲರ ಮೇಲಿದೆ ಸರ್ ಎಂ.ವಿ. ಋಣ

15 bdvt 2
ಭದ್ರಾವತಿಯಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿಯಿಂದ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನದ ನಿಮಿತ್ತ ನಿವೃತ್ತ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕೋಟೆಗೌಡ, ಪಂಪಣ್ಣ, ವೆಂಕೋಬ ರಾವ್, ಸಿದ್ದಲಿಂಗಯ್ಯ, ಆನಂದ್, ಎ.ಪಿ.ಕುಮಾರ್ ಇತರರಿದ್ದರು.
Published on

ಭದ್ರಾವತಿ: ನಗರದ ಸಿದ್ದರೂಢನಗರದಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿಯಿಂದ ಶುಕ್ರವಾರ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನವನ್ನು ಆಚರಿಸಲಾಯಿತು. ಸಿಲ್ವರ್ ಪಾರ್ಕ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎ.ಪಿ.ಕುಮಾರ್, ಭದ್ರಾವತಿಯ ಪ್ರತಿಯೊಬ್ಬರ ಮೇಲೆ ವಿಶ್ವೇಶ್ವರಯ್ಯ ಅವರ ಋಣವಿದೆ. ಆದ್ದರಿಂದ ಇಲ್ಲಿನ ಪ್ರತಿಯೊಬ್ಬರು ಅವರನ್ನು ಸ್ಮರಿಸಬೇಕು ಎಂದರು. ನೀರಿನ ಯೋಜನೆಗಳ ಮೂಲಕವೇ ವಿಶ್ವವಿಖ್ಯಾತಿ ಪಡೆದ ಸರ್. ಎಂ.ವಿ.ಅವರ ಸಾಧನೆ ಅವಿಸ್ಮರಣೀಯ. ಪ್ರತಿಯೊಬ್ಬರು ನಾಡು, ನುಡಿ, ಹುಟ್ಟಿದ ಊರಿನ ಬಗ್ಗೆ ಕಾಳಜಿ ತೋರುವುದರಿಂದ ಮಾತ್ರ ವಿಶ್ವೇಶ್ವರಯ್ಯ ಅವರ ಜನ್ಮದಿನದ ಆಚರಣೆಗೆ ಸಾರ್ಥಕತೆ ಮೂಡಿಸಲು ಸಾಧ್ಯ ಎಂದರು. ಹಿರಿಯ ಕಾರ್ಮಿಕ ಮುಖಂಡರಾದ ಕೋಟೆಗೌಡ, ಪಂಪಣ್ಣ, ವೆಂಕೋಬರಾವ್ ಅವರನ್ನು ಸನ್ಮಾನಿಸಲಾಯಿತು. ಗೌರವಾಧ್ಯಕ್ಷ ಸಿದ್ದಲಿಂಗಯ್ಯ, ಅಧ್ಯಕ್ಷ ಆನಂದ್, ಪದಾಽಕಾರಿಗಳಾದ ಶಾಂತಕುಮಾರ್, ಎಸ್.ಗಿರೀಶ್, ಗಿರೀಶ್ ಕುಮಾರ್, ವಕೀಲರಾದ ಪ್ರಕಾಶ್, ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net