ಜೀವ ರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು

We all have a responsibility to protect lives.
ಹುನಗುಂದ ಬಸ್ ಘಟಕದಲ್ಲಿ ಅಗ್ನಿಶಾಮಕ ಸಪ್ತಾಹ ದಿನಾಚರಣೆ ನಿಮಿತ್ತ ಅಗ್ನಿ ನಂದಕಗಳ ಬಗ್ಗೆ ಬಸ್ ಘಟಕ ಸಿಬ್ಬಂದಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಘಟಕ ವ್ಯವಸ್ಥಾಪಕ ಅರವಿಂದ ಭಜಂತ್ರಿ, ಜಗದೀಶ ಗಿರಡ್ಡಿ ಮತ್ತಿತರರಿದ್ದಾರೆ.
Published on

ಹುನಗುಂದ: ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಸಣ್ಣಪುಟ್ಟ ಅಗ್ನಿ ಅನಾಹುತಗಳಾದಾಗ ಸ್ಥಳದಲ್ಲಿಯೇ ಲಭ್ಯವಿರುವ ಎ, ಬಿ, ಸಿ ವರ್ಗದ ಅಗ್ನಿನಂದಕಗಳನ್ನು ಉಪಯೋಗಿಸಿ ಬೆಂಕಿ ನಂದಿಸಬೇಕು ಎಂದು ಅಗ್ನಿಶಾಮಕ ದಳದ ಜಗದೀಶ ಗಿರಡ್ಡಿ ಹೇಳಿದರು.

ಪಟ್ಟಣದ ಬಸ್ ಘಟಕದಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ದಿನಾಚರಣೆಯ ಅಂಗವಾಗಿ ಗುರವಾರ ಆಯೋಜಿಸಿದ್ದ ಅಗ್ನಿ ಮುಂಜಾಗ್ರತೆ ಕ್ರಮಗಳ ಬಗ್ಗೆ ಉಪನ್ಯಾಸ ಮತ್ತು ಅಣಕು ಪ್ರದರ್ಶನದಲ್ಲಿ ಮಾತನಾಡಿದ ಅವರು, ತುರ್ತು ಸಂದರ್ಭಗಳಲ್ಲಿ ಸಮಾಜಕ್ಕೆ ಉಪಕಾರಿಯಾಗುವುದರ ಜತೆಗೆ ಜೀವ ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಬಸ್ ಘಟಕ ವ್ಯವಸ್ಥಾಪಕ ಅರವಿಂದ ಬಜಂತ್ರಿ ಮಾತನಾಡಿ, ನಮ್ಮ ಇಲಾಖೆ ಸಿಬ್ಬಂದಿಗೆ ಅಗ್ನಿನಂದಕಗಳ ಉಪಯೋಗಿಸುವ ಮಾಹಿತಿ ತುಂಬಾ ಅವಶ್ಯಕವಾಗಿತ್ತು. ಇಲಾಖೆ ನಮಗೆ ಒದಗಿಸಿರುವ ಅಗ್ನಿ ನಂದಕಗಳನ್ನು ಉಪಯೋಗಿಸುವ ಮಾಹಿತಿ ನೀಡಲಾಗಿದ್ದು, ನಮ್ಮ ಸಿಬ್ಬಂದಿ ಅವುಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂದರು.

ಭೀಮಪ್ಪ ವನಕ್ಯಾಳ, ಯಲ್ಲನಗೌಡ ಗೌಡರ, ಅಶೋಕ ಕಾಮ, ಮುತ್ತಪ್ಪ ತುಮ್ಮರಮಟ್ಟಿ, ರವಿಚಂದ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net