ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ

New Project (6)
Published on

ಸುಳ್ಯ: ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ನಡೆಯಿತು. ಮಾ.15ರಂದು ಆರಂಭಗೊಂಡು 18ರ ತನಕ ನಡೆಯಿತು. 17ರಂದು ಸಂಜೆಯಿಂದ ದೈವಂಕಟ್ಟು ಮಹೋತ್ಸವ ಅಂಗವಾಗಿ ಸಂಜೆ ಶ್ರೀ ಕಾರ್ನವನ್ ದೈವದ ವೆಳ್ಳಾಟಂ, ಶ್ರೀಕೋರಚ್ಚನ್ ದೈವದ ವೆಳ್ಳಾಟಂ ನಡೆಯಿತು. 18ರಂದು ಭಕ್ತರು ಆಗಮಿಸಿ ದೈವಂಕಟ್ಟು ಮಹೋತ್ಸವದಲ್ಲಿ ಪಾಲ್ಗೊಂಡು ದೈವ ನರ್ತನ ಸೇವೆ ಕಣ್ತುಂಬಿಕೊಂಡರು. ದಿನದ 24 ಗಂಟೆ ಅನ್ನಪ್ರಸಾದ ಸೇವೆ ಮಹೋತ್ಸವ ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net