ಜಲ ಬಿಕ್ಕಟ್ಟು ತಡೆಗೆ ಜಲಾನಯನ ಮರುಸ್ಥಾಪನೆ ಅಗತ್ಯ

ಹವಾಮಾನ ಬದಲಾವಣೆ, ಕಾಂಕ್ರಿಟೀಕರಣದಿಂದಾಗಿ ಅಂತರ್ಜಲ ಮಟ್ಟ ಕುಸಿದು ಜಲ ಬಿಕ್ಕಟ್ಟು ಎದುರಾಗುತ್ತಿದೆ. ಇದರ ತಡೆಗಾಗಿ ಜಲಾನಯನ ಪ್ರದೇಶಗಳನ್ನು ಮರುಸ್ಥಾಪಿಸಬೇಕಾದ ಅಗತ್ಯವಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
jalanayana
ನಗರದ ಅರಣ್ಯ ಭವನದಲ್ಲಿ ಇಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಲಾನಯನ ಪ್ರದೇಶಗಳಿಗಾಗಿ ಅರಣ್ಯಗಳು ಮತ್ತು ನಂದಿ ಬೆಟ್ಟಗಳ ಯೋಜನೆ ಕುರಿತು ಕರಪತ್ರಗಳನ್ನು ಸಚಿವ ರಾಮಲಿಂಗಾರೆಡ್ಡಿ ಬಿಡುಗಡೆಗೊಳಿಸಿದರು. folder
Published on: 

ಬೆಂಗಳೂರು: ಹವಾಮಾನ ಬದಲಾವಣೆ, ಕಾಂಕ್ರಿಟೀಕರಣದಿಂದಾಗಿ ಅಂತರ್ಜಲ ಮಟ್ಟ ಕುಸಿದು ಜಲ ಬಿಕ್ಕಟ್ಟು ಎದುರಾಗುತ್ತಿದೆ. ಇದರ ತಡೆಗಾಗಿ ಜಲಾನಯನ ಪ್ರದೇಶಗಳನ್ನು ಮರುಸ್ಥಾಪಿಸಬೇಕಾದ ಅಗತ್ಯವಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ನಗರದ ಅರಣ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ‘ಜಲಾನಯನ ಪ್ರದೇಶಗಳಿಗಾಗಿ ಅರಣ್ಯಗಳು ಮತ್ತು ನಂದಿ ಬೆಟ್ಟಗಳ ಯೋಜನೆ’ ಅನುಷ್ಠಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಲ ಸಂರಕ್ಷಣೆ ಎಂದರೆ ಕೇವಲ ಸಂಸ್ಕರಣಾ ಘಟಕಗಳು ಅಲ್ಲ. ಅರಣ್ಯ ಜಲಾನಯನ ಪ್ರದೇಶ ಮತ್ತು ಜಲಾನಯನ ಪ್ರದೇಶಗಳ ರಕ್ಷಣೆಯೂ ಮುಖ್ಯ. ಈ ಹಿಂದೆ ಬಯಲುಸೀಮೆ ಜಿಲ್ಲೆಗಳ ನೀರಿನ ಸಮಸ್ಯೆ ನಿವಾರಣೆ ಮಾಡುವ ಗೋಪುರ ನಂದಿಬೆಟ್ಟವಾಗಿತ್ತು. ಇದರಿಂದಾಗಿ ಅದನ್ನು ಪೈಲಟ್ ಯೋಜನೆಗೆ ಆಯ್ಕೆ ವಾಡಲಾಗಿದೆ. ಇದರ ಇಳಿಜಾರುಗಳು ಅರ್ಕಾವತಿ, ದಕ್ಷಿಣ ಪಿನಾಕಿನಿ, ಉತ್ತರ ಪಿನಾಕಿನಿ ಮತ್ತು ಪಾಲಾರ್ ನದಿಗಳ ಪುನಶ್ಚೇತನಕ್ಕೆ ಕಾರಣವಾಗುತ್ತವೆ. ಜಲಾನಯನ ಪ್ರದೇಶಗಳನ್ನು ಮರುಸ್ಥಾಪನೆ ಮಾಡುವುದರಿಂದ ಬೇಸಿಗೆಯಲ್ಲಿ ನೀರಿನ ಒತ್ತಡವನ್ನು ನಿರ್ವಹಿಸಬಹುದು ಎಂದು ಹೇಳಿದರು.

ಚಿಕ್ಕಬಳ್ಳಾಪುರ ಅರಣ್ಯ ವಿಭಾಗದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಿ ಮೂರು ವರ್ಷಗಳ ಅವಧಿಯಲ್ಲಿ 600 ಹೆಕ್ಟೇರ್ ಪ್ರದೇಶದಲ್ಲಿ 1.80 ಲಕ್ಷ ಸ್ಥಳೀಯ ವಿವಿಧ ತಳಿ ಸಸಿಗಳನ್ನು ನೆಟ್ಟು ಪೋಷಿಸಲಾಗುವುದು. ಇದರ ಉಸ್ತುವಾರಿ ವಹಿಸಲು ಗ್ರಾಮ ಅರಣ್ಯ ಸಮಿತಿಗಳಿಗೆ ತರಬೇತಿ ನೀಡುವುದು, ಕಾವಲು ಮತ್ತು ಹಸರೀಕರಣ ಹೆಚ್ಚಿಸಲು ಸಮುದಾಯ ಭಾಗಿತ್ವಕ್ಕೂ ಅವಕಾಶ ನೀಡಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆಯ ಮುಖ್ಯಸ್ಥೆ ಡಾ. ಮೀನಾಕ್ಷಿ ನೇಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net