

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಬಡಾ ಉಚ್ಚಿಲ ಬಳಿ ರಸ್ತೆ ಬದಿ ಶುಕ್ರವಾರ, ಕೊಳೆತ ಕಲ್ಲಂಗಡಿ ಸುರಿದು ಪರಾರಿಯಾಗಲು ಯತ್ನಿಸಿದ ಲಾರಿಯನ್ನು ತಡೆದ ಗ್ರಾಮ ಪಂಚಾಯಿತಿ ಸದಸ್ಯ ಸಹಿತ ಗ್ರಾಮಸ್ಥರು ಚಾಲಕನಿಂದಲೇ ಮರು ತುಂಬಿಸಿ ಕಳುಹಿಸಿದ್ದಾರೆ.
ಹುಬ್ಬಳ್ಳಿಯಿಂದ ಕಲ್ಲಂಗಡಿ ಹೇರಿ ಬಂದಿದ್ದ ಲಾರಿ ಚಾಲಕ ಅದನ್ನು ಮಂಗಳೂರು ಮಾರುಕಟ್ಟೆಯಲ್ಲಿ ಖಾಲಿ ಮಾಡಿ, ಮರಳಿ ಹುಬ್ಬಳ್ಳಿಯತ್ತ ಸಾಗುತ್ತಿದ್ದಾಗ ಕೊಳೆತ ಕಲ್ಲಂಗಡಿ ಹಣ್ಣುಗಳನ್ನೆಲ್ಲ ಸುರಿದು ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಲಾರಿ ತಡೆದಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪಂಚಾಯಿತಿ ಸಿಬ್ಬಂದಿ, ದಂಡ ವಿಧಿಸಿ ಸುರಿದ ತ್ಯಾಜ್ಯವನ್ನು ಮತ್ತೆ ಲಾರಿಗೆ ತುಂಬಿಸಿ ಕೊಂಡೊಯ್ಯಲು ಹೇಳಿ, ಎಚ್ಚರಿಕೆ ನೀಡಿದ್ದಾರೆ.