ಗಿಡ-ಮರಗಳಿಗೆ ನೀರಿನ ಬಟ್ಟಲು ಅಳವಡಿಕೆ

1 sirgere 1
ಸಿರಿಗೇರಿ ಗ್ರಾಮದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಿಡ-ಮರಗಳಿಗೆ ಬಟ್ಟಲನ್ನು ಕಟ್ಟುತ್ತಿರುವುದು.
Published on

ಸಿರಿಗೇರಿ: ಇಲ್ಲಿನ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಶನಿವಾರ ಪಕ್ಷಿಗಳಿಗೆ ಕುಡಿಯುವ ನೀರಿನ ಬಟ್ಟಲಗಳನ್ನು ಕಾಲೇಜಿನಲ್ಲಿರುವ ಗಿಡ-ಮರಗಳಿಗೆ ಕಟ್ಟಿ ಮಾನವೀಯತೆ ಮೆರೆದರು.

ಪ್ರಾಚಾರ್ಯ ಎಚ್.ಜಿ.ವಿಶ್ವನಾಥ್‌ಗೌಡ ಮಾತನಾಡಿ, ಮೂಕ ಪ್ರಾಣಿಗಳ ಪಕ್ಷಿಗಳ ವೇದನೆಯನ್ನು ಅರಿಯಬೇಕು. ನಮಗೆ ಆಗುವ ಸಹಾಯವನ್ನು ಮಾಡಬೇಕು. ಬೇಸಿಗೆ ಕಾಲದಲ್ಲಿ ಅದೆಷ್ಟೋ ಪಕ್ಷಿಗಳು ನೀರಿಲ್ಲದೆ ಸಾಯುತ್ತವೆ.

ನಮ್ಮ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ಗಿಡ-ಮರಗಳಿಗೆ ನೀರಿನ ಬಟ್ಟಲನ್ನು ಕಟ್ಟಿದ್ದಾರೆ ಎಂದರು. ಉಪನ್ಯಾಸಕರಾದ ಹೊನ್ನೂರ್ ಸ್ವಾಮಿ, ಬಸವರಾಜ, ನಿತಿನ್ ಕುಮಾರ್, ಈರಣ್ಣ, ರಾಘವೇಂದ್ರ,ರಂಗಪ್ಪ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net