ಆರೋಗ್ಯಕ್ಕೆ ಶುದ್ಧ ನೀರು ಅವಶ್ಯ

water filter
Published on

ಭವಾನಿಶಂಕರ್ ಗ್ರೂಪ್ ಮುಖ್ಯಸ್ಥ ಮಂಜುನಾಥ್ ಅಭಿಮತ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಗ್ರಾಮೀಣರಿಗೆ ಉತ್ತಮ ಆರೋಗ್ಯ ನೀಡುವಲ್ಲಿ ಶುದ್ಧ ನೀರಿನ ಘಟಕಗಳು ಸಹಕಾರಿಯಾಗಿವೆ ಎಂದು ಭವಾನಿಶಂಕರ್ ಗ್ರೂಪ್ ಮುಖ್ಯಸ್ಥ ಎಚ್.ಬಿ.ಮಂಜುನಾಥ್ ಹೇಳಿದರು.
ಯಂಟಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಬಾವಿಕೆರೆ ಗ್ರಾಮದ ಬಸವ ನಗರದಲ್ಲಿ ಬುಧವಾರ ಸಮಿ-ಸಬಿನ್ಸಾ ಲಿ. ಹಾಗೂ ಭವಾನಿಶಂಕರ್ ಗ್ರೂಪ್ಸ್ ಸಹಯೋಗದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಆಧುನಿಕತೆಯಲ್ಲಿ ಜನರ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಹಾಳಾಗಿದ್ದು, ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಗ್ರಾಮೀಣರು ಶುದ್ಧ ನೀರಿನ ಜತೆಗೆ ಪೌಷ್ಟಿಕ ಆಹಾರ ಸೇವಿಸಬೇಕು. ಗ್ರಾಪಂ ಸದಸ್ಯರಿಗೆ ಸಹಕಾರ ನೀಡುವ ಮೂಲಕ ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಸಮಿ-ಸಬಿನ್ಸಾ ಗ್ರೂಫ್ಸ್ ಲಿ. ಶಾಖಾ ಮುಖ್ಯಸ್ಥ ತಿರುಮಲರೆಡ್ಡಿ ಮಾತನಾಡಿ, ಇತ್ತೀಚೆಗೆ ಅಂತರ್ಜಲದ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಭೂಮಿಯಲ್ಲಿ ದೊರೆಯುವ ನೀರಿನಲ್ಲಿ ಸಾಕಷ್ಟು ರಾಸಾಯನಿಕ ಅಂಶಗಳು ಬೆರೆತಿರುವುದರಿಂದ ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ. ಮಾನವರು ಆರೋಗ್ಯವಾಗಿರಲು ಶುದ್ಧ ನೀರು ಮುಖ್ಯ ಎಂದರು.
ಸಿಬ್ಬಂದಿ ರಾಜಗೋಪಾಲ್, ಮುಖಂಡ ಎನ್.ಗಂಗರಾಜು, ಮುನಿರಾಜು, ಮುನಿಯಪ್ಪ, ಚನ್ನಬಸಪ್ಪ, ನಂಜಪ್ಪ, ವೀರೇಶ್, ರಾಜಣ್ಣ, ಮೈಲಾರಪ್ಪ, ರಮೇಶ್, ಅಂಜನಮೂರ್ತಿ, ಬಿ.ಎಂ.ರವಿಕುಮಾರ್, ರಾಹುಲ್‌ಗೌಡ, ಶ್ರೀನಿವಾಸ್, ವಿರುಪಾಕ್ಷಯ್ಯ, ಉಮೇಶ್, ಪ್ರಸನ್ನ, ರುದ್ರಪ್ಪ, ರೇಣುಕಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net