ಬಡಮನೆಹಬ್ಬಿ ಜಲಪಾತಕ್ಕೆ ಬಿದ್ದು ಓರ್ವ ಸಾವು

missing new
Published on

ಪುತ್ತೂರು: ಕುದುರೆಮುಖ ರಾಷ್ಟ್ರೀಯ ಉದ್ಯಾವನ ವ್ಯಾಪ್ತಿಯ ಎಳನೀರು ಘಾಟ್ ಬಂಗಾರಪಲ್ಕೆ ಅರಣ್ಯ ವ್ಯಾಪ್ತಿಯ ಬಡಮನೆಹಬ್ಬಿ ಜಲಪಾತಕ್ಕೆ ಮೋಜಿಗಾಗಿ ತೆರಳಿದ ಉಜಿರೆಯ ಮೂವರು ಯುವಕರು ಆಯುತಪ್ಪಿ ಜಲಪಾತಕ್ಕೆ ಬಿದ್ದಿದ್ದು, ಓರ್ವ ಯುವಕ ಮೃತಪಟ್ಟಿದ್ದಾನೆ.

ಉಜಿರೆ ಕಾಶಿಬೆಟ್ಟುವಿನ ಸನತ್ ಶೆಟ್ಟಿ (26) ಮೃತಪಟ್ಟ ಯುವಕ. ಮಣ್ಣಿನಡಿ ಸಿಲುಕಿದ್ದ ಉಳಿದಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅರಣ್ಯ ಭಾಗಕ್ಕೆ ಪ್ರವೇಶವಿಲ್ಲದಿದ್ದರೂ, 4 ಯುವಕ ತಂಡ ಬಂಗಾರ್‌ಪಲ್ಕೆ ಜಲಪಾತಕ್ಕೆ ತೆರಳಿದ್ದರು. ಜಲಪಾತದ ಅಂಚಿನ ಗುಡ್ಡ ಕುಸಿದ ಪರಿಣಾಮ ಯುವಕರು ಜಲಪಾತಕ್ಕೆ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net