ಏಪ್ರಿಲ್ ೨೦ ರಂದು ನಾಲೆಗಳಿಗೆ ನೀರು ಹರಿಸಿ

T.YASHVANT
T.YASHVANT
Published on

ರಾಯಚೂರು ನಾರಾಯಣಪುರು ಬಲದಂಡೆ ಹಾಗೂ ತುಂಗಭದ್ರ ಎಡದಂಡೆ ಕಾಲುವೆ ಏಪ್ರಿಲ್ ೨೦ ವರೆಗೆ ನೀರು ಹರಿಸಿ ರೈತರ ಬೆಳೆಗಳನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕೆAದು ಸಂಯುಕ್ತ ಹೋರಾಟ ಸಮಿತಿ ಮುಖಂಡ ಹಾಗೂ ಕೆಪಿಆರ್‌ಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಲಾಶಯಗಳಲ್ಲಿ ಲಭ್ಯವಿರುವ ನೀರು ರೈತರ ಬೆಳೆಗಳಿಗೆ ಒದಗಿಸಬೇಕು. ತೆಲಂಗಾಣಕ್ಕೆ ನೀರು ಹರಿಸಿರುವ ಸರ್ಕಾರ ರೈತರ ಬೆಳೆಗಳಿಗೆ ನೀರು ಒದಗಿಸುವ ಮೂಲಕ ಬದ್ದತೆಯನ್ನು ಪ್ರದರ್ಶಿಸಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಜೆಪಿ ಆರ್ಥಿಕ ನೀತಿಗಳನ್ನೇ ಮುಂದುವರೆಸುತ್ತಿದೆ.  ಬಿಜೆಪಿ ಕೇಂದ್ರ ಸರ್ಕಾರ ಮೂರು ಮಾರಕ ಕಾಯ್ದೆಗಳನ್ನು ರದ್ದುಗೊಳಿಸಿದ್ದರೂ ರಾಜ್ಯ

ಸರ್ಕಾರ ಮಾತ್ರ ಅದೇ ಕಾಯ್ದೆಗಳನ್ನು ಮುಂದುವರೆಸಿದೆ.

ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಮಾತಿನಂತೆ ಮೂರು ಕಾಯ್ದೆಗಳನ್ನು ರಾಜ್ಯದಲ್ಲಿಯೂ ರದ್ದುಗೊಳಿಸಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಮಾತನಾಡಿ, ನಾರಾಯಣಪುರು ಬಲದಂಡೆ ಮತ್ತು ತುಂಗಭದ್ರ ಎಡದಂಡೆ ಕಾಲುವೆ ನೀರಿನ ಮೇಲೆ ಅವಲಂಬಿತವಾಗಿದೆ. ಸರ್ಕಾರಗಳು ಕಾಲುವೆ ನೀರು ಹರಿಸಲು ಸ್ಥಗಿತಗೊಳಿಸುವದಾಗಿ ಹೇಳುತ್ತಿವೆ. ಜಲಾಶಯದಲ್ಲಿ ನೀರಿನ ಲಭ್ಯತೆಯಿದ್ದು ಏಪ್ರಿಲ್ ೨೦ ವರೆಗೆ ಕಾಲುವೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸಬೇಕು. ಇಲ್ಲದೇ ಹೋದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶಾಂತರಾಮ ನಾಯಕ, ಖಾಜಾ ಅಸ್ಲಂ ಅಹ್ಮದ್, ಮಾರೆಪ್ಪ ಹರವಿ, ನರಸಣ್ಣ ನಾಯಕ, ಕೆ.ಜಿ.ವೀರೇಶ, ಚನ್ನಪ್ಪಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net