

ಚಿಕ್ಕೋಡಿ: ತಾಲೂಕಿನ ಶಿರಗಾಂವ ಗ್ರಾಮದಲ್ಲಿ ನೀರಿನ ಸಮಸ್ಯೆ ಎದು-ರಾ-ಗಿ-ದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಆರೋಪಿಸಿ ಚಿಕ್ಕೋಡಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಗ್ರಾಮ-ಸ್ಥ-ರು ಗ್ರಾಮ ಪಂಚಾಯಿತಿ ಕಾರ್ಯಾಲಯ ಎದುರು ಶುಕ್ರವಾರ ಖಾಲಿ ಕೊಡ ಪ್ರದ-ರ್ಶಿಸಿ ಪ್ರತಿಭಟಿಸಿದ-ರು.
ಕರವೇ ಅಧ್ಯಕ್ಷ ಸಂಜು ಬಡಿಗೇರ ಮಾತಾನಾಡಿ, ನೀರು ಕೊಡಿ ಎಂದು ಅಧಿಕಾರಿಗಳನ್ನು ಕೇಳಿದರೆ, ಒಂದಿ-ಲ್ಲೊಂದು ನೆಪ ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಶಿರಗಾಂವ ಗ್ರಾಮಸ್ಥರು ನೀರಿಗಾಗಿ ತೊಂದರೆ ಅನುಭ-ವಿ-ಸ-ಬೇ-ಕಾ-ಗಿ-ದೆ ಎಂದು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಕರವೇ ಗ್ರಾಮ ಟಕ ಅಧ್ಯಕ್ಷ ಅನೀಲ ನಾವಿ ಮಾತನಾಡಿ, ಅಧಿಕಾರಿಗಳಿಗೆ ಕಳೆದ ಹದಿನೈದು ದಿನಗ-ಳಿಂದ ನೀರು ಕೊಡುವಂತೆ ಕೇಳಿಕೊಳ್ಳುತ್ತಿದ್ದೇವೆ. ಆದರೆ, ಇಲ್ಲಿಯ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸದೆ ಉಢಾಪೆ ಉತ್ತರ ಹೇಳುತ್ತಿದ್ದಾರೆ. ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷ ಜೈಬುನ್ ತಹಸೀಲ್ದಾರ್ ಸ್ಥಳಕ್ಕೆ ಬಂದು ಎರಡು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ತಹಸೀಲ್ದಾರ್ಗೆ ಕರೆ ಮಾಡಿ ನೀರಿನ ಪರಿಸ್ಥಿತಿ ತಿಳಿ-ಸಿದಾಗ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.
ಬೀಬಿಜಾನ್ ಸಯ್ಯದ್, ಮಂಗಲ ನಾವಿ, ಕಮಲಾ ಪಾಟೀಲ, ನೀಲಾಬಾಯಿ ಮಗದುಮ್ಮ, ಗೀತಾ ಕೇಸ್ತಿ, ಶಿವ-ಕ್ಕ ಪಾಟೀಲ, ಅರಮಾನ ಸಯ್ಯದ, ರಾವಸಾಹೇಬ ಉದಗಟ್ಟಿ, ಶಿವಾಜಿ ಖಾಡೆ, ಸತೀಶ ಪೂಜಾರಿ, ಪುಟ್ಟು ಜಾಧವ, ಮಹಾದೇವ ಉದಗಟ್ಟಿ, ಸುರೇಶ ಮಗದುಮ್ಮ, ಶಿವಾನಂದ ಕೇಸ್ತಿ ಇತರರಿದ್ದರು.