ಲಿಂಗಸುಗೂರಲ್ಲಿ ನೀರು ಪೂರೈಕೆ ಅವ್ಯವಸ್ಥೆ ಸರಿಪಡಿಸಿ; ಶಾಸಕ ಡಿ.ಎಸ್.ಹೂಲಗೇರಿಗೆ ಕರವೇ ಕಾರ್ಯಕರ್ತರ ಆಗ್ರಹ

260220 Lingasuguru Karave Appeal to water
Published on

ಲಿಂಗಸುಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಿಗೆ ಕುಡಿವ ನೀರು ಪೂರೈಕೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಶಾಸಕ ಡಿ.ಎಸ್.ಹೂಲಗೇರಿ ಅವರಿಗೆ ಕರವೇ ಕಾರ್ಯಕರ್ತರು ಬುಧವಾರ ಒತ್ತಾಯಿಸಿದರು.

15 ವರ್ಷಗಳ ಹಿಂದೆ ಜನಸಂಖ್ಯೆ ಆಧರಿಸಿ ಕುಡಿವ ನೀರು ಸರಬರಾಜು ಮಾಡಲು 60 ಎಚ್‌ಪಿ ಮೋಟಾರ್ ಅಳವಡಿಸಲಾಗಿತ್ತು. ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಪುರಸಭೆ ವ್ಯಾಪ್ತಿಯ ಲಿಂಗಸುಗೂರು, ಕರಡಕಲ್, ಕಸಬಾಲಿಂಗಸುಗೂರು, ಹುಲಿಗುಡ್ಡದ 23 ವಾರ್ಡ್‌ಗಳಿಗೆ ನೀರು ಪೂರೈಸಲು ಈಗಲೂ 60 ಎಚ್‌ಪಿ ಮೋಟಾರ್ ಹೊಸದಾಗಿ ಅಳವಡಿಸಲಾಗಿದೆ. ಇದರಿಂದ ಸರಿಯಾಗಿ ಶುದ್ಧೀಕರಣವಾಗದ ನೀರನ್ನು 3 ದಿನಕ್ಕೊಮ್ಮೆ ಬಿಡಲಾಗುತ್ತಿದೆ.

ಬೇಸಿಗೆ ಆರಂಭವಾಗಿದ್ದು, ನೀರಿನ ಅಭಾವ ಎದುರಾಗುವ ಆತಂಕ ಮನೆ ಮಾಡಿದೆ. ನಗರೋತ್ಥಾನ ಯೋಜನೆಯಡಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಶಾಸಕರಾದಿಯಾಗಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕರವೇ ತಾಲೂಕು ಅಧ್ಯಕ್ಷ ಜಿಲಾನಿಪಾಷಾ, ಶಿವರಾಜ ನಾಯಕ, ಅಜೀಜ್ ಪಾಶಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net