ಇಂದು ನೀರು ಪೂರೈಕೆಯಲ್ಲಿ ವ್ಯತ್ಯಯ

Deadline for purchasing FAQ sunflowers
Published on

ವಿಜಯಪುರ : ನಗರಕ್ಕೆ ಕೊಲ್ಹಾರದ ಶುದ್ಧ ಕುಡಿಯುವ ನೀರಿನ ಟಕದಿಂದ ನೀರು ಸರಬರಾಜು ಆಗುವ ಪ್ರದೇಶಗಳಿಗೆ ಸೆ. 3 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಕೊಲ್ಹಾರ ಮೂಲ ಸ್ಥಾವರದಿಂದ ಜಲನಗರ ಪಂಪಿನ ಮನೆಯವರೆಗೆ ಅಳವಡಿಸಿದ 965/900 ಎಂಎಂ ವ್ಯಾಸದ ಎಂಎಸ್​&ಪಿಎಸ್​ಸಿ ಮುಖ್ಯ ಏರು ಕೊಳವೆ ಮಾರ್ಗದ ಚೈನೇಜ್​ 6.930 ಕಿಮೀ. ಗರಸಂಗಿ ಹಳ್ಳದ ಹತ್ತಿರ 965 ಮಿಮೀ. ವ್ಯಾಸದ ಎಂಎಸ್​ ಕೊಳವೆ ಮಾರ್ಗದ ಎಂಎಸ್​ ಮ್ಯಾನ್​ಹೋಲ್​ ಬರ್ಸ್ಟ್​ ಆಗಿದ್ದು ಹಾಗೂ ಚೈನೇಜ್​ 2.406 ಕಿಮೀ. ರಾಚಣ್ಣ ಗುಡಿ ಹತ್ತಿರ ಚೈನೇಜ್​ 9.332 ಕಿಮೀ. ರೋಣಿಹಾಳ ಗ್ರಾಮದ ಹತ್ತಿರ ಚೈನೇಜ್​ 13.165 ಕಿಮೀ. ರೋಣಿಹಾಳ ಕೆರೆ ಹತ್ತಿರ ಹಾಗೂ ಚೈನೇಜ 41.290 ಕಿಮೀ. ಬಾರಾಕೋಟರಿ ತಾಂಡಾ ಹತ್ತಿರ ಮತ್ತು ಮೊದಲನೇ ಹಂತದ 450 ಮಿಮೀ. ವ್ಯಾಸದ ಎಂಎಸ್​ ಮುಖ್ಯ ಏರು ಕೊಳವೆ ಮಾರ್ಗದ ರಮಜಾನ ಹಳ್ಳ ಬಳೂತಿ ಕ್ರಾಸ್​ ಹತ್ತಿರ ನೀರು ಸೋರುವಿಕೆಯ ತುರ್ತು ದುರಸ್ತಿ ಕಾಮಗಾರಿಗಳನ್ನು ಜಲ ಮಂಡಳಿ ವತಿಯಿಂದ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net