

ಶಿವಮೊಗ್ಗ: ಸವಳಂಗ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲ್ಸೇತುವೆ ಬಳಿ ಸ್ಮಾರ್ಟ್‌ಸಿಟಿ ಕೊಳವೆ ಮಾರ್ಗ ಬದಲಾಯಿಸುವ ಕಾಮಗಾರಿ ಕೈಗೊಂಡಿದ್ದು, ಸೆ.27 ಮತ್ತು 28ರಂದು ಬಸವೇಶ್ವರನಗರ, ನವುಲೆ, ಕುವೆಂಪು ಬಡಾವಣೆ, ಅಶ್ವತ್ಥ ನಗರ, ಎಲ್‌ಬಿಎಸ್ ನಗರ, ಕೃಷಿ ನಗರ, ಶಾಂತಿ ನಗರ, ತ್ಯಾವರೆಚಟ್ನಹಳ್ಳಿ, ಬೊಮ್ಮನಕಟ್ಟೆ, ದೇವರಾಜ ಅರಸು ಬಡಾವಣೆ, ಸಹ್ಯಾದ್ರಿನಗರ, ಜೆ.ಎಚ್.ಪಟೇಲ್ ಬಡಾವಣೆ, ಶಾರದಮ್ಮ ಬಡಾವಣೆ, ಸಹಕಾರಿ ನಗರ, ಖಾಜಿ ಖಾನ್ ಬಡಾವಣೆ, ಸೋಮಿನಕೊಪ್ಪ ಹಾಗೂ ಈ ಬಡಾವಣೆಗಳಿಗೆ ಹೊಂದಿಕೊಂಡಿರುವ ಎಲ್ಲ ಬಡಾವಣೆಗಳಲ್ಲಿ ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಭಿಯಂತರ ಸಿದ್ದಣ್ಣ ತಿಳಿಸಿದ್ದಾರೆ.