

ಲಕ್ಷ್ಮೇಶ್ವರ: ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಪೂರೈಕೆಯಾಗುವ ನೀರಿನ ಪೈಪ್‌ಲೈನ್ ದುರಸ್ತಿ ಕೈಗೊಂಡಿರುವುದರಿಂದ 2 ದಿನ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮೇವುಂಡಿ ಹಾಗೂ ಸೂರಣಗಿ ಮಾರ್ಗದಲ್ಲಿನ ಮುಖ್ಯಕೊಳವೆ ಮಾರ್ಗದಲ್ಲಿ ನೀರು ಪೋಲಾಗುತ್ತಿದೆ. ಅಲ್ಲಿ ರಿಪೇರಿ ಕೈಗೊಂಡಿದ್ದು ಅ. 3, 4ರಂದು ನೀರು ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದ್ದಾರೆ.