ಮೈಸೂರು ಮೃಗಾಲಯದಲ್ಲಿ ಜಲ ಕ್ರಾಂತಿ

mysore
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಮೈಸೂರಿನ ಚಾಮರಾಜೇಂದ್ರ ಮಗಾಲಯ ನೀರಿನ ಸ್ವಾವಲಂಬನೆ ಸಾಧಿಸುವ ಮೂಲಕ ಜಲಕ್ರಾಂತಿ ವಾಡಿದೆ. ಬಿಸಿಲಿನ ಕಾಲದಲ್ಲೂ ಪ್ರಾಣಿಪಕ್ಷಿಗಳಿಗೆ ಸಮರ್ಪಕವಾಗಿ ದಾಹ ತೀರಿಸುತ್ತಿದೆ.


ಬೇಸಿಗೆ ಕಾಲ ಸಮೀಪವಾಗುತ್ತಿರುವುದರಿಂದ ಎಲ್ಲೆಡೆ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಜನ, ಜಾನುವಾರುಗಳಿಗೆ ಕುಡಿಯಲು ನೀರಿನ ತತ್ವಾರ ಎದುರಾಗುವ ಲಕ್ಷಣಗಳು ಈಗಾಗಲೇ ಗೋಚರವಾಗುತ್ತಿವೆ. ಆದರೆ, ಮೈಸೂರು ಮಗಾಲಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿದೆ. ಮಗಾಲಯಕ್ಕೆ ಎಷ್ಟು ಬೇಕೋ ಅಷ್ಟು ನೀರನ್ನು ತನ್ನಲ್ಲೇ ಸಂಗ್ರಹಿಸಿಕೊಂಡು ವನ್ಯಜೀವಿಗಳಿಗೆ ಒದಗಿಸುತ್ತಿದೆ.


ಅತ್ಯುತ್ತಮ ಮೃಗಾಲಯ:

ದೇಶದ 3ನೇ ಅತ್ಯುತ್ತಮ ಮಗಾಲಯ ಎಂಬ ಹಿರಿಮೆ ಗಳಿಸಿರುವ ಇದು ರಾಜ್ಯದ ಅತ್ಯಂತ ಜನಪ್ರಿಯ ಮಗಾಲಯವಾಗಿದೆ. ದೇಶದ ಅತ್ಯಂತ ಹಳೇ ಪ್ರಾಣಿ ಸಂಗ್ರಹಾಲಯವಾಗಿದೆ. ಇಲ್ಲಿ 168 ವಿವಿಧ ಜಾತಿಯ ಪಕ್ಷಿಗಳು ಮತ್ತು ಪ್ರಾಣಿಗಳು ನೆಲೆಸಿವೆ. ಇವುಗಳಿಗೆ ನೀರು, ಆಹಾರ, ಆರೈಕೆ ವಾಡಿಕೊಂಡು ಪರಿಣಾಮಕಾರಿಯಾಗಿಯೂ ಜಲ ನಿರ್ವಹಣೆ ವಾಡುವ ಮೂಲಕ ವಾದರಿ ಎನಿಸಿದೆ.

ಮಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಬಿ.ಪಿ.ರವಿ ಅವರು ಇಲ್ಲಿರುವ ಕೆರೆ, ಕಲ್ಯಾಣಿ, ಕಾಲುವೆ ಸೇರಿದಂತೆ ವಿವಿಧ ಜಲ ಸಂಪನ್ಮೂಲಗಳನ್ನು ಸಂರಕ್ಷಣೆ ವಾಡಿ ಅಭಿವದ್ಧಿಪಡಿಸಿದರು. ಇದರ ಫಲವಾಗಿ ಇದೀಗ ಮಗಾಲಯವೂ ನೀರಿನ ನಿರ್ವಹಣೆಯಲ್ಲಿ ಸುಸ್ಥಿರ ಪ್ರಗತಿ ಸಾಧಿಸಿದೆ.

ನೀರಿನ ಸಂಗ್ರಹ ಹೆಚ್ಚಳ:


157 ಎಕರೆ ವ್ಯಾಪ್ತಿಸಿರುವ ಮಗಾಲಯದ ಒಳಗೆ ಎರಡು ಕೆರೆಗಳಿವೆ. ಅವುಗಳನ್ನು ಇತ್ತೀಚಿನ ವರ್ಷಗಳಲ್ಲಿ 40.16 ಲಕ್ಷ ರೂ. ವೆಚ್ಚದಲ್ಲಿ ಅಭಿವದ್ಧಿಪಡಿಸಲಾಗಿದೆ. ಹಿಂದೆ ಕೆರೆಗಳಿದ್ದ ಒಟ್ಟು ನೀರಿನ ಸಂಗ್ರಹಣೆ 90 ದಶಲಕ್ಷ ಲೀಟರ್ ಆಗಿತ್ತು. ಇವುಗಳ ಅಭಿವದ್ಧಿ ನಂತರದ ನೀರಿನ ಸಂಗ್ರಹಣೆ 120 ದಶಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಕಾರಂಜಿಕೆರೆಯಿಂದ ಹೊರ ಹರಿಯುವ ನೀರು ಮೊದಲು ಮಗಾಲಯದ ಮೂಲಕ ಪಾಲಿಕೆ ಚರಂಡಿಗೆ ಅನವಶ್ಯಕವಾಗಿ ಸೇರಿ ಹೋಗುತ್ತಿತ್ತು. ಆದರೀಗ ಕೆರೆಗಳ ಅಭಿವದ್ಧಿಯಿಂದ ಹೆಚ್ಚುವರಿ ನೀರನ್ನು ಮಗಾಲಯದೊಳಗೆ ಶೇಖರಣೆ ವಾಡಲಾಗಿದೆ. ಭೂಮಿಯ ಅಂತರ್ಜಲ ಮಟ್ಟ ವೃದ್ಧಿಸಿದ್ದು, ಕಾರಂಜಿಕೆರೆಯಿಂದ ಹೊರಹೋಗುವ ಹೆಚ್ಚಿನ ನೀರನ್ನು ಪಾಲಿಕೆ ಚರಂಡಿಗೆ ಬಿಡುವುದಿಲ್ಲ.


ಮೇಲ್ಮಟ್ಟದ ನೀರು ಸಂಗ್ರಹಣ, ನೆಲ ಮಟ್ಟದ ನೀರಿನ ತೊಟ್ಟಿಯೂ ನೆರವಿಗೆ ಬರುತ್ತಿದೆ. 41 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಇವುಗಳ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು 3.50 ಲಕ್ಷ ಲೀಟರ್‌ನಿಂದ 9 ಲಕ್ಷ ಲೀಟರ್‌ಗೆ ಹೆಚ್ಚಿಸಲಾಗಿದೆ. ನೀರಿನ ಸಮಸ್ಯೆ ತಗ್ಗಿಸಿದೆ. ಪಾಲಿಕೆಯ ನೀರಿನ ಮೇಲಿನ ಅವಲಂಬನೆಯನ್ನೂ ಕಡಿಮೆ ವಾಡಿದೆ.


ಕೃತಕ ಜಲಪಾತಗಳಿಂದ ಆಹ್ಲಾದ:


ಇಲ್ಲಿರುವ ಕತಕ ಜಲಪಾತ ನಿರ್ವಾಣದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ತೇವಾಂಶ ಹೆಚ್ಚಾಗಿದೆ. ಹಸರೀಕರಣ ಗಮನೀಯವಾಗಿ ವದ್ಧಿಯಾಗಿದೆ. ಪ್ರಾಣಿಗಳಿಗೆ ಹೆಚ್ಚಿನ ಆಹ್ಲಾದಕರ ಪರಿಸರ ಸಷ್ಟಿಯಾಗಿದ್ದು, ಅವುಗಳ ಚಟುವಟಿಕೆ ಚುರುಕುಗೊಂಡಿದೆ. ಪ್ರಾಣಿ ಮನೆಗಳಲ್ಲಿ 3, ಕೆರೆ ಮತ್ತು ಬಾವಿಯ ಹತ್ತಿರ 2 ಸೇರಿದಂತೆ 5 ಕತಕ ಜಲಪಾತಗಳಿವೆ.


ಹೊರಗಡೆಗಿಂತ ಉಷ್ಣಾಂಶ ಕಡಿಮೆ:


ಮಗಾಲಯದ ಒಳಗೆ ನೀರಿನ ಕಾಲುವೆಗಳು ಸಹ ಜಲಪೂರಣಕ್ಕೆ ಸಹಕಾರಿಯಾಗಿವೆ. 850 ಮೀಟರ್ ಉದ್ದದಷ್ಟು 9 ನೀರಿನ ಕಾಲುವೆಗಳು ಇವೆ. ನೀರಿನ ಹರಿವು ಕಲ್ಲಿನ ರಂಧ್ರದ ಮೂಲಕ ಹೋಗುವುದರಿಂದ ನೀರು ಭೂಮಿಯೊಳಗೆ ಇಂಗಿ ಅಂತರ್ಜಲ ಮಟ್ಟವು ಏರಿಕೆಯಾಗಿದ್ದು, ಮಗಾಲಯದ ಒಳಗೆ ಹೆಚ್ಚಿನ ಪ್ರವಾಣದಲ್ಲಿ ಹಸರೀಕರಣ ಕಾಯ್ದುಕೊಳ್ಳುತ್ತಿದೆ. ಇದರ ಫಲವಾಗಿ ಮಗಾಲಯದ ಹೊರಗಡೆಗಿಂತ ಸುವಾರು 3 ಡಿಗ್ರಿ ಉಷ್ಣಾಂಶ ಕಡಿಮೆಯಾಗಿದೆ.

ಒಳಚರಂಡಿ ಸುಧಾರಣೆ:


ಮಗಾಲಯದ ಆವರಣದೊಳಗೆ ಒಳಚರಂಡಿ ವ್ಯವಸ್ಥೆ ಸುಧಾರಿಸಲಾಗಿದೆ. 2023 ಮೀಟರ್ ಉದ್ದ ಒಳಚರಂಡಿ ಕೊಳವೆ, ಅದಕ್ಕೆ 46 ಕಡೆ ಚೇಂಬರ್‌ಗಳ ನಿರ್ವಾಣ, 34 ಕಟ್ಟಡಗಳ ಹಾಗೂ ಪ್ರಾಣಿಮನೆಗಳ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ಮಗಾಲಯದ ಒಳಗೆ ಯಾವುದೇ ಸ್ಥಳದಿಂದ ಮಲಿನ ನೀರನ್ನು ತೆರೆದ ಪ್ರದೇಶದಲ್ಲಿ ಹರಿಯದಂತೆ ವಾಡಲಾಗಿದ್ದು, ಇದನ್ನು ನೇರವಾಗಿ ಒಳಚರಂಡಿಗೆ ಬಿಡಲಾಗಿದೆ. ಇದರಿಂದ ಪರಿಸರ ವಾಲಿನ್ಯ, ಪ್ರಾಣಿಗಳ ಆರೋಗ್ಯವನ್ನು ಕಾಪಾಡಿಕೊಂಡು ಹೋಗಲಾಗುತ್ತಿದೆ.


ಮಗಾಲಯದ ಒಳಾಂಗಣ ರಸ್ತೆಗಳ ಮರುಡಾಂಬರೀಕರಣದಿಂದ ವಾಹನಗಳ ಸರಾಗ ಓಡಾಟಕ್ಕೆ ಹಾಗೂ ಪ್ರವಾಸಿಗರ ಓಡಾಟಕ್ಕೆ ಅನುಕೂಲವಾಗಿದೆ. ಜತೆಗೆ ಮಳೆನೀರು ಸರಾಗವಾಗಿ ಹರಿಯುವಂತಾಗಿದ್ದು, ರಸ್ತೆಯ ಮೇಲೆ ನೀರು ನಿಲ್ಲುವಿಕೆಯನ್ನು ತಡೆಗಟ್ಟಲಾಗಿದೆ. ವಾಹನ, ವೀಕ್ಷಕರಿಗೆ ಉತ್ತಮ ರಸ್ತೆಯ ಸೌಲಭ್ಯವನ್ನು ನೀಡಿದಂತಾಗಿದೆ.


ಸಂಗ್ರಹಿಸಿರುವ ಜಲವೇ ಬಳಕೆ:


10 ಇಂಗು ಗುಂಡಿ ನಿರ್ವಾಣ ವಾಡಿರುವುದರಿಂದ ಅಂತರ್ಜಲವು ಅಭಿವದ್ಧಿಯಾಗಿದ್ದು, ಮಗಾಲಯದ ಒಳಗೇ ನೀರು ಸಂಪೂರ್ಣವಾಗಿ ಇಂಗುತ್ತಿದೆ. ಮಗಾಲಯದ ಒಳಗೆ 8 ಎಕರೆ ಪ್ರದೇಶದಲ್ಲಿ 104 ಕಡೆ 6380 ಮೀಟರ್ ಉದ್ದ ತೋಟಗಾರಿಕೆಗೆ ಸ್ಪಿಂಕ್ಲರ್ ಅಳವಡಿಕೆಯಿಂದ ನೀರಿನ ಸದ್ಬಳಕೆಗೆ ಸಹಕಾರಿ ಆಗಿದೆ. ಮಳೆನೀರು ಕೊಯ್ಲು ಅಡಿಯಲ್ಲಿ ಇಲ್ಲಿರುವ ಕೆರೆಗಳಲ್ಲಿ ಸಂಗ್ರಹಿಸಿರುವ ನೀರನ್ನೇ ಉಪಯೋಗಿಸಲಾಗುತ್ತಿದ್ದು, ಕೊಳವೆಬಾವಿ ಅಥವಾ ಪಾಲಿಕೆ ನೀರಿನ ಮೇಲೆ ಅವಲಂಬನೆ ತಪ್ಪಿದೆ. ಜತೆಗೆ, ನೆಲಹಾಸಿನಲ್ಲಿ ಯಥೇಚ್ಛವಾಗಿ ಹುಲ್ಲುಹಾಸು ಬೆಳೆದಿದೆ.

ದಣಿವು ನೀಗಿಸುವ ಚಿಲುಮೆ


ಮಗಾಲಯದ ಒಳಗೆ ಕಲ್ಯಾಣಿ ನೀರಿನ ಚಿಲುಮೆಯ ಅಭಿವೃದ್ಧಿಯಿಂದ (ತರಂಗಿಣಿ ಮೂಲೆ) ಸುತ್ತಲಿನ ನೋಟ ವಿಹಂಗಮವಾಗಿದೆ. ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ಆಕರ್ಷಿಸುತ್ತಿದೆ. ಅವರ ದಣಿವು ನೀಗಿಸುತ್ತಿರುವ ಜತೆಗೆ ಹೆಚ್ಚಿನ ಮನೋಲ್ಲಾಸ ಉಣಬಡಿಸುತ್ತಿದೆ. ಸುತ್ತಮುತ್ತಲು ತಂಪು ವಾತಾವರಣದ ಅನುಭವ ಕೊಡುತ್ತಿದೆ.


350 ಮೀಟರ್ ಉದ್ದ ಕೃತಕ ಕಾಲುವೆ ಮೂಲಕ ಪಕ್ಷಿ ಮನೆಯಿಂದ ಮೊಸಳೆ ಮನೆಯವರೆಗೆ ನೀರಿನ ಮರುಬಳಕೆಯಿಂದ ಸುತ್ತಮುತ್ತಲಿನ ಸ್ಥಳವು ತೇವಾಂಶದಿಂದ ಕೂಡಿದ್ದು, ನೀರು ಸದುಪಯೋಗಗೊಳ್ಳುತ್ತಿದೆ. ಇದರಿಂದ ಶುದ್ಧ ಗಾಳಿ, ಹಸಿರು ವಾತಾವರಣ ನಿರ್ವಾಣವಾಗಿದೆ. ಈ ಕಾಲುವೆಗೆ ಪಾರಂಪರಿಕ ಬಾವಿಯಿಂದ ನೀರನ್ನು ಮರು ಬಳಸಲಾಗುತ್ತಿದೆ.

ಶಿಥಿಲಗೊಂಡಿರುವ ಪೈಪ್ ಮೋರಿಯನ್ನು ಸೇತುವೆಯಾಗಿ ಮರು ನಿರ್ವಾಣ ವಾಡಿದ್ದರಿಂದ ಹಸಿರು ವಾತಾವರಣ ಸಷ್ಟಿಯಾಗಿದೆ. ರೆಪ್ಟೈಲ್ ಕೆರೆಯ ನೀರಿನ ಸಂಗ್ರಹಣೆಯನ್ನು 62 ಮಿಲಿ ಲೀಟರ್‌ನಿಂದ 64.2 ಮಿಲಿ ಲೀಟರ್ ಸಾಮರ್ಥ್ಯದ ವರೆಗೆ ಏರಿಸಲಾಗಿದೆ. ಇದರಿಂದ ಹೊರ ಹರಿವನ್ನು ತಡೆಹಿಡಿದು, ಕೆರೆಯಲ್ಲೇ ನೀರನ್ನು ಸಂಗ್ರಹಿಸಲಾಗಿದೆ.

ಮಲಗಾಲಯ ನೀರಿನ ವಿಷಯದಲ್ಲಿ ಸ್ವಾವಲಂಬನೆ ಸಾಧಿಸಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಬೇಸಿಗೆ ನಿರ್ವಹಣೆಗಾಗಿ ಸಿದ್ಧತೆ ಸಹ ವಾಡಿಕೊಳ್ಳಲಾಗಿದೆ. ಆಹಾರ, ನೀರು ಸೇರಿದಂತೆ ಎಲ್ಲ ವಿಷಯಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ. ಇಲ್ಲಿ ರೂಪುರೇಷೆಗಳನ್ನು ಅಂತಿಮಗೊಳಿಸಿ ಅದನ್ನು ಅನುಷ್ಠಾನಕ್ಕೆ ತರಲಾಗುವುದು.
ಡಿ.ಮಹೇಶ್‌ಕುವಾರ್
ಕಾರ್ಯನಿರ್ವಾಹಕ ನಿರ್ದೇಶಕ, ಚಾಮರಾಜೇಂದ್ರ ಮಗಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net