ಪಾನೀಯ ಕೈಗಾರಿಕೆ ಸ್ಥಾಪನೆಗೆ ನೀರಿನ ಅಗತ್ಯತೆ ಮುಖ್ಯ

DSC_3403
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಪಾನೀಯ ಕೈಗಾರಿಕೆಗಳಿಗೆ ಬೆಂಬಲಿಸಲು ಬೆಳಗಾವಿಯ ಹಿಡಕಲ್​ ಆಣೆಕಟ್ಟಿನ ನೀರಿನ ಬೇಡಿಕೆ ಇದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಡಕಲ್​ ಆಣೆಕಟ್ಟು ಒಟ್ಟು 51 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಅದರಲ್ಲಿ 4 ಟಿಎಂಸಿ ಮಾತ್ರ ಕೈಗಾರಿಕಾ ಬಳಕೆಗೆ ಮೀಸಲಿಡಲಾಗಿದೆ. ಜಾಗತಿಕ ಹೂಡಿಕೆದಾರರ ಸಭೆ (ಜಿಐಎಂ) ಸಮಯದಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ ಪಾನೀಯ ಕಂಪನಿಗಳು ನೀರಿನ ಅಗತ್ಯತೆ ಪೂರೈಸಲು ಕೇವಲ 0.5 ಟಿಎಂಸಿ ಅಡಿ ಮಾತ್ರ ವಿನಂತಿಸಿವೆ ಎಂದರು.

ಪ್ರಮುಖ ಹೂಡಿಕೆದಾರರಲ್ಲಿ ಶ್ರೀಲಂಕಾದ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್​ ಒಡೆತನದ ಸಿಲೋನ್​ ಬೆವರೇಜಸ್​, ರಿಲಯನ್ಸ್​ ಜಿಯೋ ಒಡೆತನದ ಕ್ಯಾಂಪಾ ಕೂಡ ಈ ಪ್ರದೇಶದಲ್ಲಿ ಪಾನೀಯ ಉತ್ಪಾದನಾ ಘಟಕ ಸ್ಥಾಪಿಸಲು ಪ್ರಸ್ತಾಪಿಸಿದ್ದವು. ಧಾರವಾಡದಲ್ಲಿ ಪ್ರಮುಖ ನದಿ ಇಲ್ಲದಿರುವುದರಿಂದ, ಹಿಡಕಲ್​ ಆಣೆಕಟ್ಟಿನಿಂದ ನೀರು ತೆಗೆದುಕೊಳ್ಳುವ ಅನಿವಾರ್ಯತೆಯೂ ಇದೆ ಎಂದರು.

ಬೆಳಗಾವಿ ಜಿಲ್ಲೆಯ ನಿವಾಸಿಗಳು ಈ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಯ ಮಹತ್ವ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಧಾರವಾಡ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾನೀಯ ಘಟಕಗಳಿಗೆ ನೀರು ನೀಡಲು ಸಹಮತ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net