

ಮಾಂಜರಿ: ದೂಧಗಂಗಾ ನದಿಗೆ ನೆರೆಯ ಮಹಾರಾಷ್ಟ್ರ ರಾಜ್ಯದ ಕಾಳಮ್ಮಾವಾಡಿ ಜಲಾಶಯದಿಂದ ಸುಳಕುಡ ಬ್ಯಾರೇಜ್ ಮೂಲಕ 300 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಸದಲಗಾ ಪಟ್ಟಣದ ದೂಧಗಂಗಾ ನದಿಗೆ ನೀರು ಹರಿದು ಬರುತ್ತಿದೆ.
ಕಳೆದ 8-10 ದಿನಗಳಿಂದ ಹಿಂದೆ ಹುನ್ನರಗಿ, ಸಿದ್ದಾಳ, ಭೋಜ ಮುಂತಾದ ಗ್ರಾಮಗಳ ರೈತರು ರೊಚ್ಚಿಗೆದ್ದು, ಕಾರದಗಾ-ಭೋಜ ಬ್ಯಾರೇಜ್ ಬಾಗಿಲು ಹಾಕಿ ನೀರನ್ನು ತಡೆಹಿಡಿದಿದ್ದರಿಂದ ದೂಧಗಂಗಾ ನದಿಯ ಸದಲಗಾ, ಯಕ್ಸಂಬಾ ಪಟ್ಟಣದ ನೀರು ಖಾಲಿಯಾಗುತಿತ್ತು. ಶನಿವಾರ ನೀರು ಹರಿದು ಬರುತ್ತಿರುವುದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ದೂಧಗಂಗಾ ನದಿಯ ನೀರಿನಿಂದ ಮಾಂಗೂರ, ಬಾರವಾಡ, ಕಾರದಗಾ, ಬೇಡಕಿಹಾಳ, ಶಮನೇವಾಡಿ, ಬೋರಗಾಂವ ಶಿರದವಾಡ. ಜನವಾಡ, ಸದಲಗಾ, ಮಲಿಕವಾಡ ಮತ್ತು ಯಕ್ಸಂಬಾ ಪಟ್ಟಣಗಳ ರೈತರಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗುತ್ತದೆ.