ನೀರು ಬಾರದೆ ಬೆಳೆ ನಷ್ಟ

13 siraguppa 01
ಸಿರಗುಪ್ಪದಲ್ಲಿ ತಹಸೀಲ್ದಾರ್ ಎಚ್.ವಿಶ್ವನಾಥಗೆ ರೈತರು ಮಂಗಳವಾರ ಮನವಿ ಸಲ್ಲಿಸಿದರು. ಪಿ.ರಾಮನಗೌಡ, ಬಿ.ಈರನಗೌಡ, ಕೆ.ಸುಭಾಷ್‌ಚಂದ್ರ ಬೋಸ್, ಡಿ.ವೆಂಕಟೇಶ, ಮರೆಗೌಡ, ಡಿ.ಹನುಮಂತ, ದುರುಗಪ್ಪ, ಚಿದಾನಂದಪ್ಪ ಇದ್ದರು.
Published on

ಸಿರಗುಪ್ಪ: ತಾಲೂಕಿನ ಕೋಟೆಹಾಳ್ ವಿತರಣಾ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸಲು ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮದ ರೈತರು ತಹಸೀಲ್ದಾರ್ ಎಚ್.ವಿಶ್ವನಾಥಗೆ ಮಂಗಳವಾರ ಮನವಿ ಸಲ್ಲಿಸಿದರು.

ರೈತ ಪಿ.ರಾಮನಗೌಡ ಮಾತನಾಡಿ, ಕೆ.ಬೆಳಗಲ್, ಮುದೇನೂರು, ಹಿರೇಹಾಳ್, ಕೆ.ಸೂಗೂರು, ಕೋಟೆಹಾಳ್, ಶಾಲಿಗನೂರು, ರಾರಾವಿ ಹಳ್ಳಿಗಳ ರೈತರಿಗೆ ನೀರಾವರಿ ಇಲಾಖೆ ನೀರು ಬಿಡುತ್ತಿಲ್ಲ.

ಸಮರ್ಪಕವಾಗಿ ನೀರು ಬಾರದೆ ಪ್ರತಿವರ್ಷ ನಷ್ಟ ಅನುಭವಿಸುತ್ತಿದ್ದೇವೆ. ಅಲ್ಲದೆ ಈ ವರ್ಷ ಉತ್ತಮ ಮಳೆಯಾಗಿ ಕಾಲುವೆಗೆ ಬೇಗ ನೀರು ಹರಿದಿದ್ದರೂ ಈ ಭಾಗಕ್ಕೆ ಬರುತ್ತಿಲ್ಲ.

ಆದ್ದರಿಂದ ನೀರಾವರಿ ಇಲಾಖೆಯೊಂದಿಗೆ ಜಂಟಿ ತಪಾಸಣೆ ಮಾಡಿ, ವೆಲ್ಡಿಂಗ್ ತೆಗೆಸಿದಲ್ಲಿ ನಮ್ಮ ಪಾಲಿನ ನೀರು ನಿರಂತರವಾಗಿ ಹರಿಯಲಿದೆ. ನ್ಯಾಯ ದೊರಕದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು. ರೈತರಾದ ಬಿ.ಈರನಗೌಡ, ಕೆ.ಸುಭಾಷ್‌ಚಂದ್ರ ಬೋಸ್, ಡಿ.ವೆಂಕಟೇಶ, ಮರೆಗೌಡ, ಡಿ.ಹನುಮಂತ, ದುರುಗಪ್ಪ, ಚಿದಾನಂದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net