

ದೊಡ್ಡಬಳ್ಳಾಪುರ : ವಿಶ್ವ ಜಲ ದಿನದ ಅಂಗವಾಗಿ ನಗರದ ಸದ್ಗುರು ಶ್ರೀ ಗಗನರ್ಯಾ ಕಲ್ಯಾಣಿಯ ಸ್ವಚ್ಛತಾ ಕಾರ್ಯವನ್ನು ಶಾಸಕ ಧೀರಜ್ ಮುನಿರಾಜು, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ನಗರಸಭೆ ಸದಸ್ಯರಾದಿಯಾಗಿ ಸ್ಥಳಿಯ ಎಲ್ಲ ಜನಪ್ರತಿನಿಧಿಗಳು ಕೈಗೊಂಡರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಪ್ರತಿ ವರ್ಷ ಮಾ.22ರಂದು ವಿಶ್ವ ಜಲ ದಿನ ಆಚರಿಸಲಾಗುತ್ತಿದ್ದು, ಈ ವರ್ಷದ ೂಷ ವಾಕ್ಯ ಹಿಮಪಾತ ಸಂರಕ್ಷಣೆ. ಇದು ಹಿರಿ ನದಿಗಳನ್ನು ಸಂರಸುವುದನ್ನು ಒತ್ತಿ ಹೇಳುತ್ತದೆ ಮತ್ತು ಪ್ರಮುಖ ಸಿಹಿ ನೀರಿನ ಮೂಲ ಹಾಗೂ ಪರಿಸರ ವ್ಯವಸ್ಥೆಗಳನ್ನು ರಸುವುದಾಗಿದೆ. ಭವಿಷ್ಯದ ಪೀಳಿಗೆಗೆ ನೀರಿನ ಸಂರಕ್ಷಣೆ ಖಚಿತ ಪಡಿಸಿಕೊಳ್ಳಲು ಹವಾಮಾನ ಬದಲಾವಣೆಯ ವಿರುದ್ಧ ತಕ್ಷಣದ ಕ್ರಮವನ್ನು ತೆಗೆದುಕೊಳ್ಳುವ ಬಗ್ಗೆ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದರು. ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿ 98 ಕೆರೆಗಳು, ಜಿಲ್ಲಾ ಪಂಚಾಯಿತಿಯಡಿ 612 ಕೆರೆಗಳು ಸೇರಿ ಒಟ್ಟು 710 ಕೆರೆಗಳು ಇದೆ. 87 ಕಲ್ಯಾಣಿ, 146 ಕುಂಟೆ, 82 ಗೋಕಟ್ಟೆ, 36 ಕಟ್ಟೆಗಳು ಸೇರಿ ಒಟ್ಟು 356 ಸಾಂಪ್ರದಾಯಿಕ ನೀರು ಸಂಗ್ರಹಣ ಮೂಲಗಳಿವೆ. ಜಿಲ್ಲೆಯಲ್ಲಿ ಹೆಚ್ಚಿನ ಕೆರೆಗಳು ಮತ್ತು ಸಾಂಪ್ರದಾಯಿಕ ನೀರು ಸಂಗ್ರಹಣ ವ್ಯವಸ್ಥೆಗಳು ಇರುವುದರಿಂದ ಸಾಮಾನ್ಯವಾಗಿ ತಂಪು ವಾತಾವರಣ ಇರಬೇಕಾಗಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ನೀರಿನ ಸಂಗ್ರಹಣ ವ್ಯವಸ್ಥೆಗಳು ವಿವಿಧ ಕಾರಣಗಳಿಂದಾಗಿ ಣಿಸುತ್ತಿರುವುದರಿಂದ ಜಿಲ್ಲೆಯಲ್ಲಿ ತಾಪಮಾನ ಹೆಚ್ಚುತ್ತಿರುವುದನ್ನು ಗಮನಿಸಬಹುದಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ನಗರಾಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ಜಿಲ್ಲೆಯಲ್ಲಿರುವ ಕೆರೆ, ಕಲ್ಯಾಣಿ, ಕುಂಟೆಗಳನ್ನು ಪುನಶ್ಚೇತನ ಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.